ಕೊಟ್ಟೂರು
ಶಿಕ್ಷಣ ಎಂಬುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ನಮ್ಮ ದೇಶದ ಪವಿತ್ರವಾದ ಸಂವಿಧಾನದೊಳಗೆ ಅನೇಕ ರೀತಿಯ ಹಕ್ಕುಗಳನ್ನು ಕೊಟ್ಟಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದಲ್ಲಿ ಬುಧವಾರ ಶ್ರೀ ಗುರುಕೊಟ್ಟೂರೇಶ್ವರ ಆಂಗ್ಲಮಧ್ಯಮ ಶಾಲಾ ಉದ್ಘಾಟನಾ ಸಮಾರಂಭ ದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಾಚನ ನೀಡಿದರು.ಪ್ರಾಚೀನ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಅರವತ್ತು ನಾಲ್ಕು ಪದ್ದತಿಗಳಿದ್ದವು ಮಠ ಮಂದಿರದಲ್ಲಿ ಜಾತಿ, ಧರ್ಮ, ವರ್ಣ ಬೇಧ ಭಾವಗಳಿಲ್ಲದೆ ಪ್ರತಿಯೊಬ್ಬರು ಶಿಕ್ಷಣ ಪಡೆಯುತ್ತಿದ್ದರು ಎಂದು ಹೇಳಿದರು.
ಸತತ ಅಧ್ಯಾಯನ ಮಾಡುವುದರಿಂದ ವ್ಯಕ್ತಿಯ ಮುಖಚರಿ, ಮತ್ತು ಚಾರಿತ್ರ್ಯ ಬದಲಾಗುವುದರ ಜತೆಗೆ ಜ್ಞಾನದ ಭಂಡರವನ್ನು ತನ್ನ ನೆನಪಿನ ಶಕ್ತಿಯೊಳಗೆ ಅಳವಡಿಸಿಕೊಳ್ಳುತ್ತಾನೆ ಎಂದರು.ಇಂದಿನ ಶಿಕ್ಷಣ ಪದ್ದತಿಯ ಮಾನದಂಡ ಅಂಕಿ ಗಳಿಕೆಗೆ ಮಾತ್ರ ಸಿಮೀತವಾಗುತ್ತಿದೆ ಇದರಿಂದ ಯಾವುದೆ ಪ್ರಯೋಜನವಾಗುವುದಿಲ್ಲ ಶಿಕ್ಷಣದ ಜೊತೆಗೆ ಆಚಾರ, ವಿಚಾರ, ಸಂಸ್ಕಾರ ಮಕ್ಕಳಲ್ಲಿ ರೂಢಿಸಿಕೊಳ್ಳಿವಂತಹ ವ್ಯವಸ್ಥೆ ನಿರ್ಮಾಣವಾಗಬೇಕಿದೆ ಎಂದು ಸಲಹೆ ನೀಡಿದರು.
ವಿದ್ಯೆ-ವಿನಯ ಒಂದೇ ನಾಣ್ಯದ ಎರಡು ಮುಖವಿದಂತೆ. ಅನ್ನದಿಂದ ಆಕಾರ ಬರುತ್ತದೆ ಅಕ್ಷರದಿಂದ ಆಚಾರ ಬರುತ್ತದೆ. ಕಲಿಕೆ ಕೇವಲ ಒಂದೇ ಭಾಷೆಗೆ ಸಿಮೀತವಾಗದೆ ಅನ್ಯ ಭಾಷೆ ಕಲಿಯುವುದರಿಂದ ಸಮಾಜದಲ್ಲಿ ಪರಿಪೂರ್ಣ ವಿದ್ಯವಂತರಾಗುತ್ತೇವೆ ಎಂದರು.ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಹುಟ್ಟಿನಿಂದ 20 ವರ್ಷದ ತನಕ ಶಿಕ್ಷಣ ಕಲಿತರೆ 70 ವರ್ಷ ಉತ್ತಮ ಜೀವನ ಸಾಗಿಸುತ್ತಾನೆ ಅಂತಹ ಕಲಿಕಾ ವ್ಯವಸ್ಥೆ ಈ ನಾಡಲ್ಲಿದೆ ಎಂದರು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ದೇಶ ಭಕ್ತಿ, ತಂದೆ-ತಾಯಿಗಳಿಗೆ ಗೌರವಿಸುವಂತಹ ಸಂಸ್ಕತಿ ಕಲಿಸಬೇಕೆಂದು ಹೇಳಿದರು.
ನಂದೀಪುರ ಮಹೇಶ್ವರ ಸ್ವಾಮಿ ಆಶಿರ್ವಾಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಎ.ಷಡಾಕ್ಷರಪ್ಪ ವಹಿಸಿಕೊಡಿದ್ದರು, ಅಂಬಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಭರಮರೆಡ್ಡಿ.ಕೆ, ಅಂಬಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಣ್ಣ ಬಸವರಾಜ, ಅಂಬಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಶಾಂತಕುಮಾರ, ಕೆ.ಎಂ. ನಾಗರಾಜ ಶಿಕ್ಷಣ ಇಲಾಖೆ ಕೆ.ಅಯ್ಯನಹಳ್ಳಿ. ತಳವಾರ್ ಚಂದ್ರಪ್ಪ, ಚಂದ್ರಯ್ಯ ಕೊಟ್ಟೂರು, ಕೆ.ಸಿದ್ದಲಿಂಗಪ್ಪ, ಕುಡಿತಿನಿಮಗ್ಗಿ ದೇವೇಂದ್ರ ಗೌಡ, ಮುಂತಾದವರು ಇದ್ದರು.ಕಲ್ಲೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕ ರೇಣುಕಾರಾಧ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ವಾಗತ-ನಿರೂಪಣೆ- ವಂದನಾರ್ಪಣೆ ಉಪನ್ಯಾಸಕ ಗಂಗಾಧರ ರೆಡ್ಡಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ