ಎಲ್ಲರ ಬದುಕಿನ ಸಾರ್ಥಕತೆಗೆ ನಾವು ಪಡೆಯುವ ಶಿಕ್ಷಣವೇ ಮೂಲ

ಚಳ್ಳಕೆರೆ

         ಹುಟ್ಟು ಮತ್ತು ಸಾವಿನ ಮದ್ಯೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇಯಾದ ವರ್ಣಮಯ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು. ನಾವು ಪಡೆಯುವ ಗುಣಾತ್ಮಕ ಶಿಕ್ಷಣದಿಂದ ಮಾತ್ರ ಶಿಕ್ಷಣವೇ ನಮ್ಮ ಎಲ್ಲಾ ರೀತಿಯ ಅಭಿವೃದ್ಧಿಗೆ ನಾಂದಿ ಎಂದು ಪ್ರೊಬೆಷನರಿ ಜಿಲ್ಲಾಧಿಕಾರಿ ಡಾ. ಕೆ.ನಂದಿನಿದೇವಿ ತಿಳಿಸಿದರು.

         ಅವರು, ತಾಲ್ಲೂಕಿನ ಘಟಪರ್ತಿ ಗ್ರಾಮದ ವಸತಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆ, ಮಕ್ಕಳ ದಿನಾಚರಣೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಇಲಾಖೆಯೂ ಸೇರಿದಂತೆ ಪ್ರಸ್ತುತ ಸರ್ಕಾರದಲ್ಲಿ ಹಲವಾರು ಇಲಾಖೆಗಳು ತಮ್ಮದೇಯಾದ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

           ಪ್ರತಿಯೊಂದು ಇಲಾಖೆಯೂ ತನ್ನದೇಯಾದ ಗುರಿಯನ್ನು ಹೊಂದಿರುತ್ತದೆ. ಅದೇ ರೀತಿ ಪ್ರಸ್ತುತ ಶಿಕ್ಷಣ ಇಲಾಖೆಯೂ ಸಹ ಮಕ್ಕಳ ಶಿಕ್ಷಣ ನೀಡುವ ಜೊತೆಗೆ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತೆ ವಹಿಸುತ್ತಿದ್ದು, ಶಾಲೆಗೆ ದಾಖಲಾದ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ, ಶಾಲೆಯಿಂದ ದೂರ ಉಳಿಯುವ ಮಕ್ಕಳನ್ನು ಸಹ ಶಾಲೆಗೆ ಕರೆತಂದು ಶಿಕ್ಷಣ ನೀಡುವಂತಹ ಸತ್ಕಾರ್ಯವನ್ನು ಮಾಡುತ್ತಿದ್ದು, ಇದು ಸಮಾಜಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ಒದಗಿಸುತ್ತದೆ ಎಂದರು.

          ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಶಾಲೆ ಬಿಟ್ಟ ಮಕ್ಕಳ ದಾಖಲಾತಿ ಅಂದೋಲನಕ್ಕೆ ದೊಡ್ಡ ಪ್ರಮಾಣದಲ್ಲಿ ಕಳೆದ ವರ್ಷ(2017)ಅಂದಿನ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯಿ ಜೋತ್ಸ್ನಾ ಚಾಲನೆ ನೀಡಿದ್ದು, ಅ ವರ್ಷ ಹೆಚ್ಚಿನ ಮಕ್ಕಳು ಶಾಲೆಗೆ ದಾಖಲು ಮಾಡುವಲ್ಲಿ ಶಿಕ್ಷಣ ಇಲಾಖೆ ಯಶಸ್ಸಿಯಾಗಿತ್ತು.

           ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ 6 ರಿಂದ 16 ವರ್ಷದ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಲ್ಲಿ ಅವರನ್ನು ಎಲ್ಲಾ ಇಲಾಖೆಯ ಸಹಕಾರದಿಂದ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ, ಗ್ರಾಮದ ಮುಖಂಡರ ನೆರವಿನಿಂದ ಮತ್ತೆ ಶಾಲೆಗೆ ವಾಪಾಸ್ ಕರೆತರುವ ಕಾರ್ಯಕ್ರಮ ಇದಾಗಿದೆ. ಇಂದು ರಾಜ್ಯ ಸರ್ಕಾರವೇ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಣ ಇಲಾಖೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.

           ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಮ್ಮ ತಿಪ್ಪೇಸ್ವಾಮಿ ಮಾತನಾಡಿ, ಇಂದು ನಮ್ಮ ಗ್ರಾಮದ ಜನತೆಗೆ ಪುಣ್ಯ ದಿನವೆಂದು ಭಾವಿಸುವೆ. ಜಿಲ್ಲಾಧಿಕಾರಿಗಳ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಮಕ್ಕಳು ಶಾಲೆಯನ್ನು ಬಿಟ್ಟ ಬಗ್ಗೆ ಮುಕ್ತವಾಗಿ ಚರ್ಚಿಸಿ ಮತ್ತೆ ಶಿಕ್ಷಣ ನೀಡುವ ಮೂಲಕ ಅಂತಹ ಮಕ್ಕಳ ಭವಿಷ್ಯದ ಬದುಕನ್ನು ಉತ್ತಮ ಪಡಿಸಲು ಪ್ರಯತ್ನಿಸುತ್ತಿದ್ದಾರೆ.

           ಗ್ರಾಮೀಣ ಭಾಗದಲ್ಲಿ ಪೋಷಕರು ಎಂತಹ ಸಂದರ್ಭವೇ ಬರಲಿ ಮಕ್ಕಳು ಶಾಲೆಯನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಶಾಲೆಗೆ ಭೇಟಿ ನೀಡಿ ಮಕ್ಕಳ ಚಟುವಟಿಕೆಗಳ ಬಗ್ಗೆ ಚರ್ಚೆಸಬೇಕು ಎಂದರು.  

           ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ತಿಪ್ಪೇಸ್ವಾಮಿ, ಮುಖ್ಯೋಪಾಧ್ಯಾಯ ಎಸ್.ಮಂಜಪ್ಪ, ಶಿಕ್ಷಕರಾದ ಕೆ.ರಾಜಣ್ಣ, ಗ್ರಾಮ ಮುಖಂಡರಾದ ಓಬಣ್ಣ, ನಿಂಗಣ್ಣ, ಸಿದ್ದಪ್ಪ, ಹುಸೇನ್, ಎಸ್‍ಡಿಎಂಸಿ ಅಧ್ಯಕ್ಷ ಓಬಣ್ಣ, ಎಸ್.ವಿ.ರಾಮರೆಡ್ಡಿ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಬಿಆರ್‍ಸಿ ಮಂಜಪ್ಪ ಉಪಸ್ಥಿತರಿದ್ದರು, ಶಾಲೆಯ ಮುಖ್ಯ ಶಿಕ್ಷಕಿ ಬಿ.ಜಿ.ಶಾಂತಮ್ಮ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap