ಒಬ್ಬೊಬ್ಬರ ಸಮಸ್ಯೆಗಳನ್ನು ಖುದ್ದು ಆಲಿಸಿದ ತಹಸೀಲ್ದಾರ್

ಹುಳಿಯಾರು:

    ಹುಳಿಯಾರಿನಲ್ಲಿ ಕಂದಾಯ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ತಹಸೀಲ್ದಾರ್ ತೇಜಸ್ವಿನಿ ಅವರು ಒಬ್ಬೊಬ್ಬರನ್ನೇ ಕರೆದು ಅವರ ಸಮಸ್ಯೆ ಆಲಿಸಿ ಸಲಹೆ, ಸೂಚನೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು.

   ಒಬ್ಬೊಬ್ಬರ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಜಿ ಇತ್ಯಾರ್ತಕ್ಕೆ ಅಗತ್ಯವಾದ ದಾಖಲಾತಿ ಏನೇನೊ ಕೊಡಬೇಕು, ಎಷ್ಟು ದಿನಗಳಲ್ಲಿ ಈ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಹೇಳಿ ಕಳುಹಿಸುತ್ತಿದ್ದರು. ಕೆಲವರ ಅರ್ಜಿಯಲ್ಲಿ ದಾಖಲಾತಿ ಸರಿಯಿಲ್ಲದಿದ್ದರೆ ಖುದ್ದು ಚಿ.ನಾ.ಹಳ್ಳಿಗೆ ಬಂದು ತಮ್ಮನ್ನು ದಾಖಲೆಗಳ ಸಮೇತ ಭೇಟಿಯಾಗುವಂತೆ ಸಲಹೆ ಕೊಟ್ಟರು. ಕಂದಾಯ ಇಲಾಖೆಗೆ ಸಂಬಂಧ ಪಡದ ಸಮಸ್ಯೆಯಾಗಿದ್ದರೂ ಸಹ ಸಂಬಂಧ ಪಟ್ಟವರ ಗಮನಕ್ಕೆ ತರುವುದಾಗಿ ಹೇಳಿ ಕಳುಹಿಸುತ್ತಿದ್ದರು.

    ಈ ಸಭೆಯಲ್ಲಿ ಬಹುಪಾಲು ಅರ್ಜಿಗಳು ಸಾಮಾಜಿಕ ಭದ್ರತೆ ಯೋಜನೆಯ ಮಾಸಿಕ ಪಿಂಚಣಿಗೆ ಸಂಬಂಧ ಪಟ್ಟವುಗಳಾಗಿದ್ದು ಮೂರ್ನಲ್ಕು ತಿಂಗಳಿದ ಪಿಂಚಣಿ ನಿಲ್ಲಿಸಿದ್ದಾರೆ ಎಂಬ ಆರೋಪವಾಗಿತ್ತು. ರಾಜ್ಯಾದ್ಯಂತ ಪಿಂಚಣಿ ವಿತರಣೆ ನಿಲ್ಲಿಸಲಾಗಿದ್ದು ಶೀಘ್ರದಲ್ಲೇ ಪುನಃ ಆರಂಭವಾಗಲಿದ್ದು ಆತಂಕ ಪಡೆವ ಅಗತ್ಯವಿಲ್ಲ ಎಂದು ಭರವಸೆ ನೀಡಿ ಕಳುಹಿಸಿದರು. ಅಲ್ಲದೆ ಡಬಲ್ ಪಿಂಚಣಿ ಹಾಕಿರುವುದಾಗಿ ಹೇಳಿ ನಮ್ಮಿಂದ ಹೆಚ್ಚುವರಿಯಾಗಿ ಹಣ ವಾಪಸ್ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದ್ದು ಇಂತಹವರು ಕಛೇರಿಗೆ ಬಂದು ಸಮಸ್ಯೆ ಸರಿಪಡಿಸಿಕೊಳ್ಳುವಂತೆ ತಿಳಿಸಿದರು.

    ಆಧಾರ್ ತಿದ್ದುಪಡಿಗಾಗಿ ಯಳನಾಡು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆರೆಗೆ ಬಿದ್ದು ಸಾವನ್ನಪ್ಪಿದ ನನ್ನ ಮಗನ ಶವಸಂಸ್ಕಾರಕ್ಕೆ ಹಣ ನೀಡುವುದಾಗಿ ತಾವೇ ಭರವಸೆ ನೀಡಿದ್ದರೂ ಇನ್ನು ಕೊಟ್ಟಿಲ್ಲವೆಂದುಮೃತ ಮಗನ ತಾಯಿ ಶಾಹೇದಾ ಬೇಗಂ ಮನವಿ ಮಾಡಿದರು. ಇದಕ್ಕೆ ಶೀಘ್ರದಲ್ಲೇ ಕೊಡಿಸುವ ಭರವಸೆ ನೀಡಿದರು. ಬಗರ್ ಹುಕ್ಕುಂಗೆ ಅರ್ಜಿಯಾಗಿ ಹತ್ತದುನೈದು ವರ್ಷವಾಗಿದ್ದು ಇಲ್ಲಿಯವರೆವಿಗೂ ಸಾಗುವಳಿ ಚೀಟಿ ಕೊಟ್ಟಿಲ್ಲ ಎಂದು ಅನೇಕರು ಮನವಿ ಮಾಡಿದರು. ಶಾಸಕರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ನಡೆಸಿ ಅರ್ಹರಿಗೆ ಹಕ್ಕು ಪತ್ರ ವಿತರಿಸುವುದಾಗಿ ತಿಳಿಸಿದರು.

    ಒಟ್ಟಾರೆ ಬೆಳಿಗ್ಗೆ 10-30 ಕ್ಕೆ ಆರಂಭವಾದ ಕಂದಾಯ ಅದಾಲತ್ ಮಧ್ಯಾಹ್ನ ಊಟದ ಸಮಯವನ್ನೂ ಲೆಕ್ಕಿಸದೆ ಸಂಜೆ 3.30 ರ ವೆವಿಗೂ ನಡೆಯಿತು. ತಹಸೀಲ್ದಾರ್, ಶಾಸಕರು ಹಾಗೂ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಊಟಕ್ಕೂ ತೆರಳದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಿದರು. ಪಶು, ಅರಣ್ಯ, ತೋಟಗಾರಿಗೆ, ರೇಷ್ಮೆ, ಮೀನುಗಾರಿಗೆ, ಕೃಷಿ ಹೀಗೆ ಎಲ್ಲಾ ಇಲಾಖೆಗಳಿಂದ ಒಟ್ಟು 332 ಅರ್ಜಿಗಳು ಬಂದಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap