ಬ್ಯಾಡಗಿ:
ಪಟ್ಟಣದಲ್ಲಿ ಎಸ್‍ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಇಂಗ್ಲೀಷ ಮಾಧ್ಯಮ ಶಾಲಾ ಉದ್ಘಾಟನಾ ಕಾರ್ಯಕ್ರಮವು ಶನಿವಾರ ಜರುಗಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರಕಾರವು ನೂತನ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿ ಅದರಲ್ಲಿ 1ನೇ ತರಗತಿಯಿಂದ ಇಂಗ್ಲೀಷ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡುತ್ತಿದೆ. ಈ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮದಲ್ಲಿ ಭೋಧಿಸಲು ತರಬೇತಿ ಪಡೆದ ಶಿಕ್ಷಕರನ್ನು ಗುರ್ತಿಸಿ ನೀಯೋಜಿಸಲಾಗಿದೆ. ಅಲ್ಲದೇ ತರಗತಿಗಳಿಗೆ ಅಗತ್ಯವಿರುವ ಹೊಸ ಪಠ್ಯ ಪುಸ್ತಕಗಳನ್ನು ಸರಕಾರವು ಶೀಘ್ರದಲ್ಲಿಯೇ ಪೂರೈಸಲಿದೆ ಎಂದರು.
ಈ ಆಂಗ್ಲ ಮಾಧ್ಯಮದ ತರಗತಿಗಳನ್ನು ಲಭ್ಯವಿರುವ ಕೊಠಡಿಗಳಲ್ಲಿ ಪ್ರಾರಂಭಿಸಲಿದೆ. ತರಗತಿಯ ಕೊರೆತೆ ಕಂಡು ಬಂದಲ್ಲಿ ಹೊಸ ಕಟ್ಟಡಗಳಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅದೇ ರೀತಿಯಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು (ಎಲ್‍ಕೆಜಿ) ಕನ್ನಡ ತರಗತಿಗಳನ್ನು ಪ್ರಾರಂಭಿಸಲಾಗುವುದು, ಎಲ್‍ಕೆಜಿ ಶಾಲೆಯ ಪ್ರವೇಶಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಜೂ 10 ರಿಂದ ತರಗತಿಗಳು ಪ್ರಾಂಭವಾಗಲಿವೆ.
ತರಗತಿಗಳಿಗೆ 3.5 ವರ್ಷದಿಂದ 4.5 ವರ್ಷದ ವಯೋಮಾನದ ಗರಿಷ್ಠ 30 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುವುದಲ್ಲದೇ ತರಗತಿಗಳಿಗೆ ಬೋಧಿಸಲು ಅರ್ಹ ಶಿಕ್ಷಕರನ್ನು ಹಾಗೂ ಒಬ್ಬ ಆಯಾರನ್ನು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳಲಾಗುವುದು. ಶಿಕ್ಷಕರಿಗೆ ತಿಂಗಳಿಗೆ 7500 ರೂ.ಗಳು, ಹಾಗೂ ಆಯಾಗೆ 5000 ರೂ.ಗಳ ಸಂಭಾವನೆ ನಿಗದಿಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಧುರೀಣರಾದ ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ, ರಾಜು ಹೊಸಕೇರಿ, ಸೋಮಣ್ಣ ಮಾಳಗಿ, ವಿಜಯ ಮಾಳಗಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಚ್.ರಾವಳ, ಪ್ರಾಚಾರ್ಯ ಬಿ.ಎಮ.ಕಾಡಪ್ಪನವರ, ಮುಖ್ಯೋಪಾಧ್ಯಯ ಎಸ್.ಬಿ.ಇಮ್ಮಡಿ, ಐ.ಎಸ್.ಅಕ್ಕಿ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








