ಚಿತ್ರದುರ್ಗ
ಕುರುಬರು ಕೂಡಿಕೆಟ್ಟರು ಅನ್ನುವ ಮಾತು ಬದಲಾಗಿ ಕುರುಬರು ಕೂಡಿ ಕಟ್ಟಿದರು ಎಂಬುದನ್ನು ತೋರಿಸಬೇಕು ಆಗ ಮಾತ್ರ ಯಾವುದೇ ಸಾಧನೆ ಮಾಡಲು ಸಾದ್ಯ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಮಠದ ಕುರುಬರ ಹಟ್ಟಿಯಲ್ಲಿ ಇಂದು ಹಮ್ಮಿಕೊಂಡಿದ್ದ ಕನಕಭವನ ನಿರ್ಮಾಣಕ್ಕೆ ಸಂಗ್ರಹಿಸಿದ ದೇಣಿಗೆ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿ ಅವರು, ನಮ್ಮಲ್ಲಿರುವ ಒಳ ಜಗಳಗಳನ್ನು ಬಿಟ್ಟು ನಮ್ಮ ಶಕ್ತಿಯನ್ನು ತೋರಿಸಬೇಕು. ಇದರಿಂದಲೇ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ ಎಂದರು.
ನಾವು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ. ನಮ್ಮ ಮಕ್ಕಳಲ್ಲಿ ಪ್ರತಿಭೆ ಇದೆ ಅದೇ ರೀತಿ ಬಡತನವೂ ಇದೆ. ಇದ್ದರೂ ಕೂಡ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬೀಳಬಾರದು ಎಂದ ಅವರು ಸ್ಥಿತಿವಂತರು ಬಡತನದಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಾಯಕನಾಗುವ ವ್ಯಕ್ತಿ ಸಮುಧಾಯದವರ ಮಧ್ಯೆ ಇರಬೇಕು. ಅಗ ಮಾತ್ರ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ಸಮಾಜದವರು ಮುನ್ನಡೆಯಬೇಕು ಎಂದರು.ಸಮಾಜದ ಆಸ್ತಿಗಳನ್ನು ಮಠ ಅಥವಾ ಪ್ರದೇಶ ಕುರುಬರ ಸಂಘದಡಿ ತಂದು ರಕ್ಷಣೆ ಮಾಡುವ ಕೆಲಸ ಮಾಡಿ. ಸಮುಧಾಯದ ಆಸ್ತಿ ಯರೊಬ್ಬರ ಸ್ವತ್ತಾಗಲು ಬಿಡಬಾರದು ಎಂದ ಅವರು ಸಮಾಜಕ್ಕೆ ದ್ರೋಹ ಬಗೆದವರನ್ನು ಯಾರೂ ಸಹ ಕ್ಷಮಿಸಬಾರದು. ಸಮಾಜದ ಆಸ್ತಿಗಳನ್ನು ರಕ್ಷಣೆ ಮಾಡುವುದು ಸಮುಧಾಯದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಮಾಜಿ ಶಾಸಕರು ಹಾಗೂ ಕಾಗಿನೆಲೆ ಗುರುಪೀಠದ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ಮಾತನಾಡಿ, ಕನಕಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಆಗಿದ್ದಾಗ ನಗರದ ಧವಳಗಿರಿ ಬಡಾವಣೆಯಲ್ಲಿ ನಿವೇಶನವನ್ನು ನೀಡಿದ್ದು, 6 ಕೋಟಿ ರೂ.ಗಳ ವೆಚ್ಚದಲ್ಲಿ ಕನಕಭವನ ಕಟ್ಟಲು ರೂಪರೇಷೆಯನ್ನು ಸಹ ತಯಾರು ಮಾಡಿಲಾಗಿದೆ ಎಂದರು.ರಾಜ್ಯ ಸರ್ಕಾರದ ಈ ಸಾಲಿನ ಬಜೆಟ್ನಲ್ಲಿ 4 ಕೋಟಿ ರೂಗಳ ಅನುಧಾನವನ್ನು ಕೊಡಿಸುವಂತೆ ಇಲ್ಲಿನ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಲ್ಲಿ ಸಂಘದ ವತಿಯಿಂದ ಮನವಿ ಮಾಡಲಾದ್ದು, ಅವರು ಸಹ ಅನುಧಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೆ ಬೇಕಾದರೂ ಸೇರಿ ಬೆಂಬಲ ನೀಡಿ ಆದರೆ ಸಮುದಾಯಕ್ಕೆ ಯಾವುದೇ ತರಹ ಧಕ್ಕೆ ಭಾರದ ರೀತಿಯಲ್ಲಿ ಎಲ್ಲಾರೂ ಒಗ್ಗೂಡಿ ಸಮುಧಾಯ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿ ಶ್ರಮಿಸಬೇಕು ಎಂದು ಕರೆ ನೀಡಿದರು.ಸಮುದಾಯ ನಿರ್ಮಾಕ್ಕೆ ಭಕ್ತರಿಂದ ಅನುಧಾನ ಕ್ರೂಡಿಕರಿಸ ಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಮಠದಕುರುಬರ ಹಟ್ಟಿಯಲ್ಲಿ ಮಾಡಲಾಗಿದೆ ಇದೇ ರೀತಿ ಜಿಲ್ಲೆಯಾದ್ಯಂತ ಭಕ್ತರಿಂದ ಹಣ ಕ್ರೂಡಿಕರಿಸಲಾಗುವುದು ಎಂದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಶ್ರೀರಾಂ ಮಾತನಾಡಿ, ಶ್ರೀ ಮಠದ ವತಿಯಿಂದ ಬಡ ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹವನ್ನು ನೀಡಲಾಗುತ್ತಿದ್ದು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಶ್ರೀಮಠವು ನೆರವು ನೀಡಲಾಗವುದೆ ಎಂದು ಹೇಳಿದರು.
ರಾಜ್ಯ ಸಂಘದ ನಿರ್ದೇಶಕ ಬಿ.ಟಿ.ಜಗದೀಶ್ ಮಾತನಾಡಿ, ಕನಕ ಭವನ ನಿರ್ಮಾಣಕ್ಕೆ 50 ಸಾವಿರ ರೂ ಕೊಟ್ಟವರ ಹೆಸರನ್ನು ಹಾಕುವುದರ ಜೊತೆಗೆ ಕುಟುಂಬದ ಸದಸ್ಯರಲ್ಲಿ ಒಬ್ಬರ ಮದುವೆಗೆ ಭವನವನ್ನು ಉಚಿತವಾಗಿ ನೀಡಲಾಗುವುದು ಎಂದರು.
ರಾಜ್ಯದ ಬಹಳಷ್ಟು ಕಡೆ ಭವನ ನಿರ್ಮಾಣ ಆಗಿದೆ ಇಲ್ಲೂ ಸಹ ಬೇಗ ನಿರ್ಮಾಣ ಮಾಡಬೇಕು ಇದಕ್ಕಾಗಿ ಎಲ್ಲಾರ ನೆರವು ಅಗತ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ಯ ನಿರ್ದೇಶಕಿ ರಜನಿ ಲೇಪಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಿ.ಗೌಡ್ರು,
ಮಹಿಳಾ ಸಂಘದ ಅಧ್ಯಕ್ಷೆ ಮಿನಾಕ್ಷಿ, ತಾಲ್ಲೂಕು ಸಂಘದ ಅಧ್ಯಕ್ಷ ಜಗನ್ನಾಥ್ ಸೇರಿದಂತೆ ಇತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
