ಚಿತ್ರದುರ್ಗ:
ಸಾರ್ವಜನಿಕರು ಓಡಾಡಲು ಕಷ್ಟಪಡುತ್ತಿದ್ದರಿಂದ ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.ಐದನೇ ವಾಡ್‍ನಲ್ಲಿ ಭಾನುವಾರ ಬೋರ್‍ವೆಲ್ ಉದ್ಘಾಟಿಸಿದ ನಂತರ ತ್ಯಾಗರಾಜ ಬೀದಿಯಲ್ಲಿ 20 ಲಕ್ಷ ರೂ.ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
35 ನೇ ವಾರ್ಡ್‍ನಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಡಾಂಬರೀಕರಣಗೊಳಿಸಲಾಗುವುದು. ಎ.ಪಿ.ಎಂ.ಸಿ.ರಸ್ತೆ ದುರಸ್ಥಿಯಾಗಲಿದೆ. ಶಾಸಕರ ನಿಧಿಯಿಂದ ಒಟ್ಟು 55 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ನಗರೋತ್ಥಾನ ಮೂರನೇ ಹಂತದಲ್ಲಿ 35 ಕೋಟಿ ರೂ.ಗಳ ಕಾಮಗಾರಿ. ವಿಶೇಷ ಅನುದಾನದಡಿ 25 ಕೋಟಿ ರೂ.ಗಳನ್ನು ರಸ್ತೆ ಅಗಲೀಕರಣಕ್ಕೆ ನೀಡಲಾಗಿದೆ. ಚಳ್ಳಕೆರೆ ಗೇಟ್‍ನಿಂದ ಪ್ರವಾಸಿ ಮಂದಿರದತನಕ ರಸ್ತೆ ಅಗಲೀಕರಣಕ್ಕೆ ಹತ್ತೊಂಬತ್ತು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು
ನಗರೋತ್ಥಾನ, ಅಮೃತ್‍ಸಿಟಿ ಯೋಜನೆಯಲ್ಲಿಯೂ ಮೂರವರೆ ಕೋಟಿ ರೂ.ಗಳ ಕಾಮಗಾರಿ ನಡೆಯುತ್ತಿದೆ. ಹಂತ ಹಂತವಾಗಿ ನಗರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸುವುದಾಗಿ ಹೇಳಿದ ಶಾಸಕರು ವಾಸವಿ ವಿದ್ಯಾಸಂಸ್ಥೆ ಮುಂಭಾಗವಿರುವ ಹಳೆ ತರಕಾರಿ ಮಾರುಕಟ್ಟೆಯನ್ನು ಕೆಡವಿ ಜೂನ್ ವೇಳೆಗೆ ಹೊಸದಾಗಿ ಮಳಿಗೆಗಳನ್ನು ನಿರ್ಮಿಸಿಕೊಡುವುದಾಗಿ ಅಲ್ಲಿನ ವ್ಯಾಪಾರಸ್ಥ ಮಹಿಳೆಯರಿಗೆ ಆಶ್ವಾಸನೆ ನೀಡಿದರು.
ನಗರಸಭೆ ಸದಸ್ಯರುಗಳಾದ ಹರೀಶ್, ಜಯಣ್ಣ, ಬಿಜೆಪಿ.ವಕ್ತಾರಸ ನಾಗರಾಜ್‍ಬೇದ್ರೆ, ಉತ್ಸವಾಂಭ ಪರಮೇಶ್, ಪ್ರಾಣೇಶ್, ವಿಜಯಮ್ಮ, ಶೇಷಗಿರಿರಾವ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ