ಕಾಶ್ಮೀರ ಸಹಜವಾಗಿಲ್ಲ : ರಾಹುಲ್ ಗಾಂಧಿ

ನವದೆಹಲಿ:

     ದೇಶದಲ್ಲಿ ಏಕಪಕ್ಷಿಯ ಆಡಳಿತದ ಕ್ರಮದಿಂದ ಕಣಿವೆ ರಾಜ್ಯವು ಅಕ್ಷರಶಹಃ ಬಂಧನದಲ್ಲಿ ಎಂದು ಅನ್ನಿಸಲು ಶುರುವಾಗಿದೆ .ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಇಲ್ಲಿ ಜನಸಾಮಾನ್ಯರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತಿದೆ ಮತ್ತು ರಾಜಕೀಯ ವ್ಯವಸ್ಥೆಯನ್ನು ದುರ್ಬಲ ಗೊಳಿಸಿ ರಾಜ್ಯದ ಅಭಿವರದ್ಧಿಗೆ ಕೇಂದ್ರ ಸರ್ಕಾರ ಮಾರ್ಮಿಕ ಹೊಡೆತ ನೀಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಇನ್ನು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ನಾವಿನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದಂತೆಯೇ ನಮ್ಮ ರಾಜ್ಯ ಪ್ರವೇಶ ಮಾಡದಂತೆ ತಡೆ ಹಿಡಿದು ನಮಗೆ ವಾಪಾಸ್ ಹೋಗುವಂತೆ ತಾಕೀತು ಮಾಡಲಾಗಿದೆ .ಕಾಶ್ಮೀರ ನಮದೇ ದೇಶದ ಒಂದು ಭಾಗವೇ ಆಗಿರುವಾಗ ನಾವು ಅಲ್ಲಿಗೆ ಹೋಗಲು ನಮಗೆ ಸ್ವಾತಂತ್ರ್ಯವಿಲ್ಲವೇ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ .

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಮತ್ತು ರಾಜ್ಯ ವಿಭಜನೆ ಮಾಡಿದೆ ನಂತರದಲ್ಲಿ ಕೇಂದ್ರ ಸರ್ಕಾರ  ರಾಜ್ಯದಲ್ಲಿ ಹೇರಿದ್ದ ವಾರಗಳ ನಿರ್ಬಂಧಗಳ ನಂತರ ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಹೇಳುತ್ತಿರುವ ಕೇಂದ್ರವು ನಾವು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ನೀಡಿದ ಆಹ್ವಾನದ ಮೇರೆಗೆ ಇಲ್ಲಿಗೆ ಬಂದರೂ ನಮ್ಮನ್ನು ತಡೆಯಲು ಕಾರಣವೇನು ಎಂದು ಕೇಳಲು ಇಚ್ಚಿಸುತ್ತೇನೆ ಎಂದಿದ್ದಾರೆ. 

    “ಕೆಲವು ದಿನಗಳ ಹಿಂದೆ, ನನ್ನನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವಂತೆ ರಾಜ್ಯಪಾಲರು ಆಹ್ವಾನಿಸಿದ್ದರು. ಹಾಗಾಗಿ ನಾನು ಆಹ್ವಾನವನ್ನು ಸ್ವೀಕರಿಸಿದೆ. ಎಲ್ಲವೂ ಸಾಮಾನ್ಯವಾಗಿದೆ ಮತ್ತು ರಾಜ್ಯಕ್ಕೆ ಭೇಟಿ ನೀಡಲು ಅವರು ನನಗೆ ವಿಮಾನವನ್ನು ಕಳುಹಿಸುವುದಾಗಿ ರಾಜ್ಯಪಾಲರು ಸೂಚಿಸಿದ್ದರು. ನಾನು ಅವರಿಗೆ ಹೇಳಿದೆ – ನನಗೆ ನಿಮ್ಮ ವಿಮಾನದ ಅಗತ್ಯ ಇಲ್ಲ ,ಆದರೆ ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸುತ್ತೇನೆ ಮತ್ತು ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬರುತ್ತೇನೆ “ಎಂದು ಹೇಳಿದ್ದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

   ನಾವು ಕಾಶ್ಮೀರದ ಜನರ ಜೊತೆ ಮಾತನಾಡಲು ಬಂದಿದ್ದೇನೆ ಆದರೆ ದುರಾದೃಷ್ಟವಶಾತ್ ನಮ್ಮನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಹಿಡಿಯಲಾಯಿತು ಎಂದು ಹೇಳಿದ್ದಾರೆ, ಮತ್ತು ನಮಗೆ ತಕ್ಷಣ ದೆಹಲಿಗೆ ವಾಪಾಸಾಗುವಂತೆ ತಿಳೀಸಲಾಯಿತು ಎಂದಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ