ಹುಳಿಯಾರು:
ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಪರಿಹಾರ ಹಣವನ್ನು ವಿತರಿಸಲಾಯಿತು.
ಹುಳಿಯಾರು ಹೋಬಳಿ ತಿಮ್ಲಾಪುರ ಅಂಚೆ ಸೀಗೆಬಾಗಿಯ ಸಾವಿತ್ರಮ್ಮರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಸ್ವ ಸಹಾಯ ಸಂಘದಲ್ಲಿ ಸದಸ್ಯರಾಗಿದ್ದು ಇತ್ತೀಚೆಗೆ ಮಳೆ ಇಂದಾಗಿ ಮನೆ ಬಿದ್ದು ನಷ್ಟ ಉಂಟಾಗಿತ್ತು. ಈ ಬಗ್ಗೆ ವರದಿಯನ್ನು ಪಡೆದುಕೊಂಡ ಧರ್ಮಾಧಿಕಾರಿಗಳು 7,500 ರೂ. ಪರಿಹಾರಧನವನ್ನು ಮಂಜೂರು ಮಾಡಿದ್ದರು.
ಈ ಮೊತ್ತದ ಚೆಕ್ಕನ್ನು ತುಮಕೂರು ಉತ್ತರ ಜಿಲ್ಲೆಯ ಧರ್ಮಸ್ಥಳ ಸಂಸ್ಥೆಯ ನಿರ್ದೇಶಕರಾದ ದಿನೇಶ್ ಪೂಜಾರಿಯವರು ಸಾವಿತ್ರಮ್ಮರಿಗೆ ವಿತರಿಸಿದರು. ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್, ಮೇಲ್ವಿಚಾರಕಿ ಧನಲಕ್ಷ್ಮಿ, ಮಾಳಪ್ಪ ಮತ್ತು ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ