ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ…!!!!

ಹಾವೇರಿ :

         ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಟ 2018-19 ನೇ ಸಾಲಿನ ಸ್ಪರ್ಧೆಗಳು ನಗರದ ಸರಕಾರಿ ಉರ್ದು ಪ್ರೌಢಶಾಲೆ ಜರುಗಿದವು.

       ಸರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಅಂದಾನೆಪ್ಪ ವಡಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಕ್ರೀಯಾಶೀಲರಾಗಿದ್ದು,ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಸಹಪಠ್ಯ ಚಟುವಟಿಕೆಗಳು ಶಾಲಾ ಹಂತದಲ್ಲಿ ಮಕ್ಕಳಿಗೆ ಸಹಕಾರಿಯಾಗಿವೆ. ಕುತೂಹಲ ಕೆರಳಿಸುವ, ಆಸಕ್ತಿ ಹಿಡಿದಿಡುವ, ಪ್ರಶ್ನಿಸಲು ಪ್ರೋತ್ಸಾಹಿಸುವ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ, ಸ್ವಾವಲಂಬಿ ಜೀವನವನ್ನು ನಡೆಸಲು, ಗುಣಮಟ್ಟದ ಶಿಕ್ಷಣ ಅವಶ್ಯಕತೆಯಿದೆ.ಇಂದಿನ ಸ್ಪರ್ಧಾತ್ಮಕಯುಗದಲ್ಲಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರಿಯುತ್ತಿರುವ ಈ ದಿನಗಳಲ್ಲಿ ಬದ್ಧತೆಯಿಂದ ಬೋಧನೆ ಮಾಡಿದಾಗ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.

          ವಿಷಯ ಪರಿವಿಕ್ಷಕರು ಉಪನಿರ್ದೇಶಕರಾದ ಮಂಜಪ್ಪ.ಆರ್ ಸ.ಉ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಂ. ಫಡ್ನೇಶಿ ಇವರು ಅತಿಥಿಗಳಾಗಿ ಭಾಗವಹಿಸಿ ಸಹಪಠ್ಯ ಚಟುವಟಿಕೆಗಳಿಂದ ಶಿಕ್ಷಣದಲ್ಲಿ ಸ್ಪೂರ್ತಿದಾಯಕ ಕಲಿಕೆ ಸಾಧ್ಯ ಭೋಧನೆಗೆ ಪ್ರೇರಕವಾಗಿದೆ ಎಂದು ಹೇಳಿದರು.

         ಜಿಲ್ಲೆಯ ವಿವಿಧತಾಲೂಕಿನ 128 ಶಿಕ್ಷಕರು ರಸಪ್ರಶ್ನೆ, ಪ್ರಬಂಧ ಪಾಠೋಪಕರಣಗಳ ತಯಾರಿಕೆ, ಆಶುಭಾಷಣ, ಜಾನಪದಗೀತೆ, ವಿವಿಧಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಶಿಕ್ಷಣ ಸಂಯೋಜಕರಾದ ಸಿದ್ದರಾಜು. ಎಸ್.ಎಸ್. ನಡುವಿನಮಠ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link