ತುರುವೇಕೆರೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಯಂತ್ರವನ್ನು ಕದೀಮರು ಒಡೆದು ಹಾಕಿ ಹಣ ದೋಚಲು ಯತ್ನ ನಡೆಸಿ ವಿಫಲರಾಗಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ದಬ್ಬೆಘಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಹೋಬಳಿ ಕೇಂದ್ರವಾದ ದಬ್ಬೆಘಟ್ಟ ಗ್ರಾಮದಲ್ಲಿ ಎಸ್.ಬಿ.ಐ ಶಾಖೆ ವತಿಯಿಂದ ಎಟಿಎಂ ಅಳವಡಿಸಲಾಗಿತ್ತು. ಸೋಮವಾರ ರಾತ್ರಿ ಕಳ್ಳರು ಎಟಿಎಂಗೆ ನುಗ್ಗಿ ಎಟಿಎಂ ಯಂತ್ರವನ್ನು ಒಡೆದು ಹಾಕಿದ್ದಾರೆ. ಆದರೆ ಯಂತ್ರದೊಳಗಿನ ಹಣವನ್ನು ತೆಗೆದುಕೊಳ್ಳಲು ವಿಫಲರಾಗಿದ್ದಾರೆ. ಎಟಿಎಂನಲ್ಲಿ 7 ಲಕ್ಷಕ್ಕೂ ಅಧಿಕ ಹಣ ಇತ್ತು ಎಂದು ಹೇಳಲಾಗಿದೆ. ಕೆಲವು ದಿನಗಳಿಂದ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ ಎನ್ನಲಾಗಿದೆ. ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.