ಬೆಂಗಳೂರು:
ರಾಜ್ಯದಲ್ಲಿ ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಗೆ ನಿನ್ನೆ ತಾನೇ ಮತದಾನ ಮುಗಿದಿದೆ. ಆದರೆ, ಫಲಿತಾಂಶ ಪ್ರಕಟ ಮುನ್ನವೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸದ ಅನ್ನೋ ಬೋರ್ಡ್‍ವೊಂದುಕಾಣಿಸಿಕೊಳ್ಳುವ ಮೂಲಕ ಇದೀಗ ಚೆರ್ಚೆಗೆ ಗ್ರಾಸವಾಗಿದೆ.
ಫಲಿತಾಂಶ ಬರುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಅವರ ಹೆಸರಿರುವ ನಾಮಫಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿಖಿಲ್ ಕೆ. ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ ಎಂಬ ಬೋರ್ಡ್ ಇದಾಗಿದ್ದು,ಅಭಿಮಾನಿಯೋರ್ವ ನಿಖಿಲ್ ಕುಮಾರಸ್ವಾಮಿಗೆ ಈ ರೀತಿಯ ಉಡುಗರೆಯೊಂದನ್ನು ನೀಡಿದ್ದಾನಂತೆ. ಈ ಬೋರ್ಡ್‍ಇದೀಗ ಕರ್ನಾಟಕ ಜೆಡಿಎಸ್‍ಪಕ್ಷದ ಫೇಸ್‍ಬುಕ್ ಪೇಜ್‍ನಲ್ಲಿ ಹರಿದಾಡುತ್ತಿದೆ.