ಕೊರೋನಾ ಎಫೆಕ್ಟ್: ತೋಟಗಾಕೆ ಬೆಳೆಯಲ್ಲಿ ಸಂಪೂರ್ಣ ನಷ್ಟ ಅನುಭವಿಸಲಿದ್ದಾನೆ ರೈತ

ಹಗರಿಬೊಮ್ಮನಹಳ್ಳಿ:
 
      ಕೊರೋನಾ ವೈರಸ್‍ನ ಪರಿಣಾಮ ಲಾಕ್‍ಡೌನ್ ಎಫೇಕ್ಟ್‍ನಿಂದ ರಾಜ್ಯದಲ್ಲಿ ತೆರೆಯದ ಹೂ, ಹಣ್ಣು, ತರಕಾರಿ ಮಾರುಕಟ್ಟೆಯಿಂದ ಮುಂದಿನ ದಿನಗಳಲ್ಲಿ ತಿಂಗಳಲ್ಲಿ ತೋಟಗಾರಿಕೆ ಬೆಳೆಯ ರೈತರು ಸಂಪೂರ್ಣ ನಷ್ಟ ಅನುಭವಿಸಲಿದ್ದಾನೆ ಎನ್ನುವುದು ಕೃಷಿಕರ ಸಂಕಷ್ಟ.
 
       ತಾಲೂಕಿನಲ್ಲಿ 11 ಸಾವಿರಕ್ಕೂ ಹೆಚ್ಚು ಹೆಕ್ಟರ್ ತೋಟಗಾರಿಕೆ ಬೆಳೆಯನ್ನು ಅವಲಂಭಿತರಾಗಿರುವ 7ಸಾವಿರಕ್ಕೂ ಹೆಚ್ಚು ರೈತರಿದ್ದಾರೆ. ಇದರಲ್ಲಿ ಮಲ್ಲಿಗೆ ಬೆಳೆಗಾರರೇ ಹೆಚ್ಚು, ಜೊತೆಗೆ ಸಂಪಿಗೆ, ಕನಕಾಂಬರಿ, ಗುಲಾಬಿ, ಸುಗಂದ್‍ರಾಜ್ ಹೂಗಳಾಗಿವೆ. ಇವುಗಳ ಜೊತೆಜೊತೆಗೆ ದ್ರಾಕ್ಷಿ, ಪಪ್ಪಾಯಿ, ಬಾಳೆ, ಮಾವು, ಪೇರಲ ಹಾಗೂ ಸಪೋಟ ಹಣ್ಣುಗಳ ಬೆಳಗಾರರು ಇದ್ದಾರೆ. ಇದರಲ್ಲಿಯೇ ಕೆಲ ರೈತರು ವಿವಿಧ ತರವರಿ ತರಕಾರಿ ಬೆಳೆಯುತ್ತಿದ್ದಾರೆ. ಈ ಕೊರೋನಾದಿಂದ ಬೆಳೆದ ಬೆಳೆಯನ್ನು ಸಾಗಟುಮಾಡಲು ಅವಕಾಶವಿಲ್ಲವಾಗಿದೆ. ಅವಕಾಶ ಕಟ್ಟರೂ ತೆರೆಯದ ಮಾರುಕಟ್ಟೆಯಿಂದ ಭಾಗಶಃ ನಷ್ಟ ಅನುಭವಿಸುತ್ತಿದ್ದಾರೆ ಈ ತೋಟಗಾರಿಕೆ ಬೆಳೆಗಾರರು.
       ಮಾರ್ಚ ಕೊನೆಯಲ್ಲಿ ಸೇರಿದಂತೆ ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಈ ತಾಲೂಕಿನಲ್ಲಿ 2ಸಾವಿರ ಮೆಟ್ರಿಕ್‍ಟನ್ ನಷ್ಟು ವಿವಿಧ ತರವರಿ ತರಕಾರಿ ಬೆಳೆ ಬೆಳೆಯಲಾಗುತ್ತಿದೆ. 6ಸಾವಿರ ಮೆಟ್ರಿಕ್‍ಟನ್ ನಷ್ಟು ವಿವಿಧ ರೀತಿಯ ಹಣ್ಣುಗಳ ಬೆಳೆಗಳ ಉತ್ಪಾದನೆ ಬರುತ್ತದೆ. ಇಷ್ಟೂ ತರಕಾರಿ ಮತ್ತು ಹಣ್ಣುಗಳಿಗೆ ಈ ತಾಲೂಕಿನಲ್ಲಿ ಗ್ರಾಹಕರು ಸಿಗುವುದು ಕಷ್ಟಸಾಧ್ಯ. ಇದಕ್ಕಾಗಿಯೇ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಪ್ರದೇಶಗಳು ಸೇರಿದಂತೆ ಹೊರರಾಜ್ಯಗಳಿಗೂ ಸರಬರಾಜು ಆಗುತ್ತದೆ.
       
        ಆದರೆ, ದಲ್ಲಾಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ಲಾಕ್‍ಡೌನ್‍ನಲ್ಲಿರುವುದರಿಂದ ಈ ರೈತರ ಬೆಳೆ ಬೆಳೆಯಲಾಗದೆ ಇರಲಾರದು. ಒಂದೊಂದು ಬೆಳೆಯ ಆಯುಷು 3ತಿಂಗಳು, ಈಗಾಗಲೇ ಹೂ ಮತ್ತು ಹಣ್ಣು ಫಸಲು ಬರಲು ಆರಂಭಿಸಿ 15-20ದಿನಗಳಾಗುತ್ತಿವೆ. ಈಗಾಗಲೇ ಕೊರೋನಾ ಎಫೆಕ್ಟ್‍ನಿಂದ 15ದಿನಗಳಿಗೂ ಹೆಚ್ಚುಕಾಲ ಕಳೆದಿದೆ. ಹೀಗೆ ಮುಂದುವರೆದರೆ ರೈತರು ಆತ್ಮಹತ್ಯೆಯಂತ ಪ್ರಕರಣಕ್ಕೆ ತುತ್ತಾಗಲಿದ್ದಾರೆ ಎಂದು ರೈತರೇ ಹೇಳುವ ಮಾತಾಗಿದೆ. ಈ ವರ್ಷ ಹಣ್ಣು ಬೆಳೆಗಳಲ್ಲಿ ನಷ್ಟ ಅನುಭವಿಸುವುದೇ ಹೆಚ್ಚು, ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಬೀಳಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ, ಈ ತೋಟಗಾರಿಕೆ ಕೃಷಿಯನ್ನೆ ನಂಬಿಕೊಂಡಿರುವ ಸಹಸ್ರಾರು ಸಂಖ್ಯೆಯ ಕುಟುಂಬಗಳ ಕೂಲಿಕಾರ್ಮಿಕರು ಕಂಗಲಾಗಿದ್ದಾರೆ. ಇವರಿಗೆ ಒಂದೊತ್ತಿನ ಊಟಕ್ಕೂ ತೊಂದರೆಯಾಗುತ್ತಿರುವುದು ಸತ್ಯ.  
       ದವಸಧಾನ್ಯ ಬೆಳೆಯನ್ನು ಸಂಗ್ರಹಿಸಲು ರೈತರಿಗೆ ಅವಕಾಶ ಇರುತ್ತೆ. ಆದರೆ, ಈ ತೋಟಗಾರಿಕೆ ಬೆಳೆಯನ್ನು ಸಂಗ್ರಹಿಸಲು ಸಾಧ್ಯವುವಿಲ್ಲ. ಮಾರಾಟಮಾಡಲು ತಾಲೂಕಿನಲ್ಲಿ ಅಷ್ಟು ಗ್ರಾಹಕರು ಸಿಗುವುದಿಲ್ಲ. ಇನ್ನು ಮನೆಮನೆಗೂ ಹೋಗಿ ಮಾರಾಟಮಾಡ ಬೇಕು ಎನ್ನುವುದು ಹಣ್ಣು ಬೆಳೆಗಾರರಿಗೆ ಕಷ್ಟ. ಸರ್ಕಾರ ಈ ಕೂಡಲೆ ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಹೋದರೆ, ಈ ತೋಟಗಾರಿಕೆ ಬೆಳೆಯ ರೈತರಿಗೆ ದೇವರೇ ಗತಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link