ಹೊಸಪೇಟೆ
ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಬೆಳೆನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ರಾಯರಕೆರೆ ಪ್ರದೇಶದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ. ಗುಂಡಾ ಕಾಯ್ದಿಟ್ಟ ಪ್ರದೇಶದ ಗುಡ್ಡದಿಂದ ದೊಡ್ಡ ಹಳ್ಳದ ನೀರು ರಾಯರಕೆರೆ ಪ್ರದೇಶಕ್ಕೆ ಹರಿದಿದ್ದು, ಕಬ್ಬು, ಬಾಳೆ, ಮೆಕ್ಕೆಜೋಳ, ಜೋಳ, ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ರಾಯರಕೆರೆ ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ನೀರು ನುಗ್ಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆದು ನಿಂತ ಬೆಳೆ ಹಾಳಾಗಿರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗುಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದರೆ, ಕೆಲ ಹಳ್ಳಿಗಳಲ್ಲಿ ಮನೆಗಳು ಕೂಡ ಬಿದ್ದಿವೆ. ಬೆಳೆ ಹಾನಿ ಹಾಗೂ ಮನೆಗಳು ಬಿದ್ದಿರುವ ಕುರಿತು ತಾಲೂಕಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.
ಹೊಸಪೇಟೆಯ ಅತಿಥಿ ಗೃಹ ಪ್ರದೇಶದಲ್ಲಿ 18 ಮಿ.ಮೀ. ಮಳೆಯಾದರೆ, ರೈಲ್ವೆ ನಿಲ್ದಾಣ 15, ಟಿಬಿಡ್ಯಾಂ 11.6, ಕಮಲಾಪುರ 35.3, ಗಾದಿಗನೂರು 16.2 ಮತ್ತು ಮರಿಯಮ್ಮನಹಳ್ಳಿಯಲ್ಲಿ 47 ಮಿ.ಮೀ. ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ