ಹಾವೇರಿ :
ರೈತರು ಸಂಕಷ್ಟದಲ್ಲಿ ಇದ್ದು, ಸರ್ಕಾರ ಸಾಲ ವಸೂಲಾತಿಗಾಗಿ ಒತ್ತಾಯ ಮಾಡುವುದಾಗಲಿ, ನೋಟಿಸ್ ನೀಡುವುದಾಗಿ ಮಾಡಬಾರದು ಎಂದು ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹನಮಂತಪ್ಪ ಹುಚ್ಚಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿದ ಅವರು ಸತತ ಬರಗಾಲ ಹಾಗೂ ಈ ವರ್ಷ ಅತಿವೃಷ್ಟಿಯಿಂದ ರೈತರ ಬದುಕು ಹೇಳಿಕೊಳ್ಳುವಂತಿಲ್ಲ. ಬೇಸಾಯಕ್ಕೆ ಸಂಬಂಧ ಪಟ್ಟ ಸಾಲವನ್ನು ರೈತರು ಮಾಡಿರುತ್ತಾರೆ ಆದರೆ ಅವರಿಂದ ವಸೂಲಿ ಮಾಡುವ ಹುನ್ನಾರವನ್ನು ಸರ್ಕಾರದ ನೀತಿಯಿಂದ ಪರೋಕ್ಷವಾಗಿ ಕಂಡು ಬರುತ್ತಿದೆ. ರೈತರ ಶಾಲು ಹಾಕಿಕೊಂಡು ಸಿಎಂ ಆಗಿ ಪ್ರಮಾಣ ವಚನ ಮಾಡಿದ ಬಿಎಸ್ ಯಡಿಯೂರಪ್ಪನವರೆ ರೈತರ ಹಿತ ಕಾಯುವ ಕೆಲಸ ಮಾಡಬೇಕು ಅನಾವಶಕವಾಗಿ ರೈತರಿಗೆ ಯಾವುದೇ ಖಾಸಗಿ ಹಾಗೂ ಸರ್ಕಾರಿ ಸೌಮ್ಯದ ಬ್ಯಾಂಕುಗಳಾಗಲಿ ತೊಂದರೆ ನೀಡಿದರೆ ರಾಜ್ಯದ ತುಂಬೆಲ್ಲ ರೈತರು ಬಿದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ.ರೈತರ ಆರ್ಥಿಕ ಪರಸ್ಥಿತಿಗೆ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ ನಾವೇಕೆ ಸಾಲ ಮಾಡುತ್ತೇವೆ ರೈತರ ಹಿತ ಕಾಯುವ ಕೆಲಸವನ್ನು ಸಿಎಂ ಮಾಡಲಿ ಎಂದು ಆಗ್ರಹಿಸಿದರು.
ಜಿಲ್ಲಾ ಗೌರವಾಧ್ಯಕ್ಷ ದೀಪಕ ಗಂಟಿಸಿದ್ದಪ್ಪನವರ ಮಾತನಾಡಿ ರೈತರು ಕೃಷಿಗೆ ಪೂರಕವಾಗಿ ಟ್ರಾಕ್ಟರಗಳನ್ನು ಸಾಲವಾಗಿ ಮಾಡಿ ಖರೀದಿ ಮಾಡಿರುತ್ತಾರೆ. ಆದರೆ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾದರೆ ಬೇಸಾಯ ಮಾಡುವುದು ಹೇಗೆ ? ರೈತರ ಬದುಕಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಾಲವಸೂಲಾತಿಯನ್ನು ಖಂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ