ಬಳ್ಳಾರಿ:
ವಾಲ್ಮಿಕಿ ಸಮುದಾಯದ ಜನಾಂಗದವರ ಬಗ್ಗೆ ಕೊಪ್ಪಳ ಮತ್ತು ಹಾವೇರಿ ಜಿಲ್ಲೆ ಯಲ್ಲಿ ಕುರುಬ ಜನಾಂಗದ ವ್ಯಕ್ತಿಅವಹೇಳನ ಕಾರಿಯಾಗಿ ಮಾತಾನಾಡಿ ವ್ಯಾಟ್ಸ್ ಆಪ್ ಮತ್ತು ಪೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ರಾಯಲ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು
ನಗರದ ಕಾಗೆ ಪಾರ್ಕ್ ನಿಂದ ರಾಜ್ ಕುಮಾರ್ ರಸ್ತೆಯ ಮುಖಾಂತರ ನೂರಾರು ಸಂಖ್ಯೆಯಲ್ಲಿ ವಾಲ್ಮಿಕಿ ಜನಾಂಗದವರು ಸೇರಿ ಪ್ರತಿಭಟನೆಯ ಮೂಲಕ ಡಿಸಿ ಕಛೇರಿಯ ವರೆಗೆ ಜಾತ ನಡೆಸಿ ಡಿಸಿ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದ ನಂತರ ಜಿಲ್ಲಾಧಿಕಾರಿಯ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿಯನ್ನು ನೀಡಿ ನಂತರ ಮಾತನಾಡಿದ ಅವರು ಈ ಹೇಳಿಕೆಯಿಂದ ಪ್ರ ಜ್ಞಾವಂತ ಸಮಾಜ ನಾಚುವಂತ ಕೆಲಸವಾಗಿದೆ, ಇದನ್ನು ಎಲ್ಲಾ ವರ್ಗದವರು ಮತ್ತು ನಮ್ಮ ಸಮಾಜದವರು ನೋಡಿ ನಮಗೆ ಚಿಂತಾಜನಕವಾಗಿ ಅವಮಾನವಾಗಿದೆ,ವಾಲ್ಮಿಕಿ ಸಮುದಾಯವು ತನ್ನದೆ ಯಾದ ಘನತೆ ಗೌರವ ಗಳೊಂದಿಗೆ ಜ್ಯಾತ್ಯತೀತ ವಾಗಿ ಜೀವನ ನಡೆಸುವ ಜನಾಂಗವಾಗಿದೆ ಎಂದರು,ಹಾಗೆಯೇ ಅವಾಚ್ಯಶಬ್ದಗಳಿಂದ ನಿಂದಿಸಿದವರನ್ನು ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ವ್ಯಕ್ತಿಯಾದರು
ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ ಜಾತಿ ನಿಂದನೆ ಕೇಸ್ ದಾಖಲಿಸಿ ಕಾನೂನಿನ ಚೌಕಟ್ಟಿನಲ್ಲಿ ಬಂದಿಸಿ ಜೈಲಿಗೆ ಕಳುಹಿಸಬೇಕೆಂದು ಈ ಮೂಲಕ ಬಳ್ಳಾರಿ ಜಿಲ್ಲೆಯ ವಾಲ್ಮಿಕಿ ಮತ್ತು ನಾಯಕ ಹೊರಾಟ ಸಮಿತಿ ಒತ್ತಾಯಿಸುತ್ತದೆ ಇಂತಹ ಕೃತ್ಯಗಳು ಮಾಡುವವರ ವಿರುದ್ಧ ಹೆಚ್ಚರಿಕೆ ಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇಡಿ ನಾಯಕ ಸಮುದಾಯದ ಉಗ್ರವಾದ ಹೋರಾಟ ನಡೆಸುತ್ತೇವೆ ಹೆಚ್ಚರಿಕೆ ಸಂದೇಶ ನೀಡಿದರು ಈ ಸಮಯದಲ್ಲಿ ಎನ್ ಸತ್ಯನಾರಾಯಣ, ಬಿ,ರಘು ಬಿ ರುದ್ರಪ್ಪ ರಂಜಿತ್ ಕುಮಾರ್ ಇನ್ನೂ ಮುಂತಾದವರು ಹೊರಾಟದಲ್ಲಿ ಭಾಗವಹಿಸಿದ್ದರು