ಮೇ18ಕ್ಕೆ ದುರುಗಮ್ಮ ರಥೋತ್ಸವ

ಕೊಟ್ಟೂರು :

    ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೋಂದು ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೋಂಡಿರುವ ಸುಕ್ಷೇತ್ರ ಕೊಟ್ಟೂರು. ಆಗಿ ಹುಣ್ಣಿಮೆಯ ದಿನವಾದ ಮೇ 18 ರಂದು ಶನಿವಾರ ಮತ್ತೊಂದು ವೈಶಿಷ್ಟತೆಗೆ ಸಾಕ್ಷಿಯಾಗಲಿದೆ.

    ಅದುವೇ ಜೀವಂತ ಕೊಳಿಗಳನ್ನು ರಥಕ್ಕೆ ತೂರುವ ವೈಶಿಷ್ಟ ರಥೋತ್ಸವವಾಗಿದೆ. ಹೌದು ಪ್ರತೀ ವರ್ಷದ ಸಂಪ್ರದಾಯದಂತೆ ಆಗಿ ಹುಣ್ಣೀಮೆಯ ದಿನದಂದು ನಡೆಯುವ ಪಟ್ಟಣದ ಬಿಕ್ಕಿ ಮರಡಿ ದುರುಗಮ್ಮ ದೇವಿ ರಥೋತ್ಸವದಲ್ಲಿ ಭಕ್ತರು ಜೀವಂತ ಕೋಳಿಗಳನ್ನು ತೂರಿ ದೇವಿಯನ್ನು ಸಂತೃಪ್ತಪಡಿಸುವ ಪರಂಪರೆಯನ್ನು ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

     ರಥೋತ್ಸವಕ್ಕೆ ಎಲ್ಲೆಡೆ ಬಾಳೆಹಣ್ಣು ಉತ್ತುತ್ತಿಗಳನ್ನು ತೂರುವುದು ಕಾಣಬಹುದಾಗಿದ್ದರೆ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಥ ಕೊಟ್ಟೂರಿನಲ್ಲಿ ಇಂತಹ ವಿಶಿಷ್ಟ ಸಂಪ್ರದಾಯ ಈಗಲೂ ನಡೆದುಕೊಂದು ಬರುತ್ತಿದೆಯಲ್ಲದೇ ದೇವಿ ಜಾತ್ರೆಗಳಲ್ಲಿ ಕುರಿ,ಕೋಳಿ, ಬಲಿಕೊಡುವುದು ಸಾಮಾನ್ಯ. ಆದರೆ ಕೊಟ್ಟೂರಿನಲ್ಲಿ ಪ್ರಾಣಿ ಬಲಿಯಂತಹ ಹಿಂಸೆ ನಡೆಯದೇ ಜೀವಂತ ಕೋಳಿಗಳನ್ನೇ ರಥಕ್ಕೆ ತೂರಲಾಗುತ್ತದೆ.

    ಪ್ರತೀ ವರ್ಷದ ಈ ದಿನದಂದು ಜರುಗುವ ಬಿಕ್ಕಿ ಮರಡಿ ದುಗಮ್ಮ ರಥೋತ್ಸವದಲ್ಲಿ ತೂರುವ ಕೋಳಿಗಳನ್ನು ಸಿಕ್ಕವರು ಖಂಡಿತಾ ಹತ್ಯೆ ಗೈಯ್ಯುವುದಿಲ್ಲ. ಬದಲಾಗಿ ಮನೆಗೊಯ್ದು ಸಾಕಿ ಸಲುಹಿ ಮತ್ತೇ ಮುಂದಿನ ವರ್ಷಕ್ಕೆ ಜರುಗುವ ರಥೋತ್ಸವಕ್ಕೆ ಈ ಕೋಳಿಗಳನ್ನು ತೂರುತ್ತಾ ಬರುತ್ತಾರೆ. ಮೇ 18ರ ಶನಿವಾರ ನಡೆಯಲಿರುವ ಈ ರಥೋತ್ಸವದ ಸಂಭ್ರಮ ಪಟ್ಟಣದ ಪ್ರತೀ ಮನೆಯಲ್ಲಿ ಕಾಣಬಹುದಾಗಿದ್ದು ಸಿಹಿ ಪದಾರ್ಥಗಳನ್ನು ಅಡುಗೆ ಮಾಡಿ ದೇವಿಗೆ ನೈವೈದ್ಯ ಅರ್ಪಿಸುತ್ತಾರೆ.

     ಎಲ್ಲಿದೆ- ಕೊಟ್ಟೂರಿನ ಕೆರೆಯ ದಿಬ್ಬದಮೇಲೆ ಈ ಬಿಕ್ಕಿ ಮರಡಿ ದುಗುಗಮ್ಮ ದೇವಿಯ ಗುಡಿ ಇದೆ. ಗುಡಿಯ ಹಿಂಬಾಗದಲ್ಲಿನ ಹೊಲ ಪ್ರದೇಶಗಳಲ್ಲಿ ರಥೋತ್ಸವ ನಡೆಯುತ್ತದೆ ಇಷ್ಟೇ ಅವಧಿಯಲ್ಲಿ ಕೊಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೋಂಡು ದುಗುರಮ್ಮದೇವಿಯ ರಥಕ್ಕೆ ಜಾಲನೆ ದೊರುಕುತ್ತಿದ್ದಂತೆ ಹರಕೆಹೊತ್ತ ಭಕ್ತರು ರಥದ ಮೇಲೆ ಜೀವಂತ ಕೋಳಿಗಳನ್ನು ತೂರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap