ಉಡುಪಿ:
ದೇಶದಲ್ಲಿ ಈಗ ಚುನಾವಣಾ ಪರ್ವ ಆರಂಭವಾಗಿದ್ದು ಇಷ್ಟು ದಿನ ರಾಜಕೀಯ ನಾಯಕರು ಸಿನಿಮಾನಟರ ಮೇಲೆ ಬರುತ್ತಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಈಗ ಪತ್ರಿಕೋದ್ಯಮಕ್ಕೂ ತಟ್ಟಿದೆ , ಹಿರಿಯ ಪತ್ರಕರ್ತ ಸೇರಿ ಐವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ದಿನೇಶ್ ಅಮೀನ್ ಮಟ್ಟು ಅವರೊಡನೆ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ ದಲಿತ ನಾಯಕ ಇಂದೂಧರ ಹೊನ್ನಾಪುರ, ಜಿ.ಎನ್. ನಾಗರಾಜ್, ಮಹೇಂದ್ರ ಕುಮಾರ್ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಾರ್ಚ್ 17ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಈ ಐವರು ಮಾಡಿದ ಭಾಷಣ ಚುನಾವಣಾ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಮಾತ್ರವಲ್ಲದೆ ಧರ್ಮ ನಿಂದನೆ ಸಹ ನಡೆದಿದೆ ಎಂಬ ಮಾಹಿತಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ವೀಕ್ಷಣಾಧಿಕಾರಿಗಳ ದೂರಿನ ಹಿನ್ನೆಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೋಲೀಸರು ತನಿಖೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








