ಪೆಟ್ಟಿಗೆ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ:1.5 ಲಕ್ಷ ರೂ ನಷ್ಟ

ಶಿರಾ

           ಇಂದು ಬೆಳಿಗ್ಗೆ ನಗರದ ಮೆಕ್ಕಾ ರೈಸ್ ಮಿಲ್ ರಸ್ತೆಯ ಮೂರು ಪೆಟ್ಟಿಗೆ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸದರಿ ಅಂಗಡಿಗಳಲ್ಲಿದ್ದ ಬ್ಯಾಟರಿ ರೀಚಾರ್ಜ್ ಸಾಮಾಗ್ರಿಗಳು ಸೇರಿದಂತೆ ವಿವಿಧ ವಾಹನಗಳ ಬಿಡಿ ಭಾಗಗಳು ಸುಟ್ಟು ಹೋದ ಘಟನೆ ನಡೆದಿದೆ.
ನಗರದ ಮೆಕ್ಕಾ ರೈಸ್‍ಮಿಲ್ ರಸ್ತೆಯ ಮೊಹಮದ್‍ಬಾಬು, ನಾಸಿರ್ ಹಾಗೂ ಸೈದ್ ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಗಳಿಗೆ ಎಲೆಕ್ಟ್ರಿಕ್ ಸಕ್ರ್ಯುಟ್‍ನಿಂದ ಬೆಂಕಿ ಕಾಣಿಸಿಕೊಂಡಿದ್ದು ಸದರಿ ಅಂಗಡಿಗಳು ಬೆಂಕಿಯಿಂದ ಸುಟ್ಟಿವೆ. ಸಮೀಪದಲ್ಲಿಯೇ ಇದ್ದ ಮಂಜುನಾಥ್ ಹೋಟೆಲ್‍ಗೂ ಬೆಂಕಿ ತಗುಲಿದ್ದು ನಷ್ಟ ಉಂಟಾಗಿದೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap