ಭಯಮುಕ್ತ ಜಗತ್ತಿನ ನಿರ್ಮಾಣಕ್ಕೆ ಬಸವ ಸಂದೇಶವೇ ಮದ್ದು : ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ:

      ಭಯ ಮುಕ್ತ ಜಗತ್ತಿನ ನಿರ್ಮಾಣಕ್ಕೆ ಬಸವ ಸಂದೇಶವೇ ಮದ್ದು, ಭಯ ಮತ್ತು ಭಯೋತ್ಪಾದನೆಯಕರಿ ನೆರಳಲ್ಲಿ ನರಳುತ್ತಿರುವ ಮನುಕುಲಕ್ಕೆ ನೆಮ್ಮದಿಯನ್ನುಕೊಟ್ಟು, ಶಾಂತಿ ಹಾಗೂ ಸಾಮರಸ್ಯದಜಗತ್ತನ್ನು ನಿರ್ಮಿಸಲು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ಬದುಕು-ಬರಹದ ಮೌಲಿಕಅಂಶಗಳುಕಾರಣಎಂದು ಸಾಣೇಹಳ್ಳಿ ಮಠದಶ್ರೀ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಆಶ್ರ್ರಿವಚನ ನೀಡಿದರು.

        ಆಸ್ಟ್ರೇಲಿಯಾ(ಸಿಡ್ನಿ) ಎಮ್ಮಿಂಗಟನ್‍ಕಮ್ಯುನಿಟಿ ಸೆಂಟರ್‍ನಲ್ಲಿ ಸಿಡ್ನಿ ಬಸವ ಸಮಿತಿ ಮತ್ತುರಾಷ್ಟ್ರೀಯ ಬಸವ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಸಿಡ್ನಿ ಬಸವ ಸಮಿತಿಯ ಬೆಳ್ಳಿಹಬ್ಬ’, `ಅಂತರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ’ ಮತ್ತು `ಬಸವ ಜಯಂತಿ’ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿ ಮತ್ತುತನ್ನಿಮಿತ್ತ ಹೊರತಂದ ಬಸವ ಸಮಿತಿಯ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

        ಸ್ವಾರ್ಥತ್ಯಾಗದಿಂದ ಸರ್ವರನ್ನು ಬಾ ಬಂಧುಎಂದುಅಪ್ಪಿಕೊಂಡ ಬಸವಣ್ಣನವರು `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ’ ಎನ್ನುವ ಸಪ್ತ ಸೂತ್ರಗಳ ಮೂಲಕ ಅಂತರಂಗ ಮತ್ತು ಬಹಿರಂಗವನ್ನು ಸ್ವಚ್ಛಗೊಳಿಸಿ ಪರಿಶುದ್ಧಜಗತ್ತಿನ ನಿರ್ಮಾಣಕ್ಕೆ ಹಂಬಲಿಸಿದ ಶರಣರನ್ನುಇಡೀ ವಿಶ್ವ ಬೆಂಬಲಿಸುವ ತುರ್ತುಅಗತ್ಯವಿದೆ.

         ಅಸ್ಟ್ರೇಲಿಯಾದಲ್ಲಿ ಬಸವ ಬೆಳಕು ಪಸರಿಸುತ್ತಿರುವುದು ಬಸವ ತತ್ವದ ಶಕ್ತಿ, ಸತ್ವದ ಪ್ರತೀಕ.ಶರಣರದು ನಡೆ-ನುಡಿ ಸಿದ್ಧಾಂತ.ಅದುಕಾರಣವೇ ಬಸವ ಸಂದೇಶ ಸರ್ವಕಾಲ, ಸರ್ವದೇಶಗಳಿಗೆ ಇಂದಿಗೆ, ಎಂದೆಂದಗೂ ಪ್ರಸ್ತುತ.ಆದರೆ ನಮ್ಮ ಮನಸ್ಸುಕಲುಷಿತಗೊಂಡಿದ್ದರೆ ಬಸವಣ್ಣ ಕೇವಲ ಭಾಷಣ, ಬರವಣಿಗೆ, ಉತ್ಸವ, ಸಮಾರಂಭಗಳಿಗೆ ಮಾತ್ರ ಸೀಮಿತವಾಗುವರು . ಹಾಗಾಗದೆ ಅವರ ತತ್ವ ಸಿದ್ಧಾಂತಗಳಂತೆ ಬದುಕನ್ನು ಕಟ್ಟಿಕೊಳ್ಳಬೇಕು.

          ಮನದ ದುರ್ಭಾವನೆ ಕಿತ್ತೆಸೆದು ಪ್ರೀತಿ, ನೀತಿ, ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯ ಪ್ರಜ್ಞೆಗಳು ಸಾಕಾರಗೊಳ್ಳಬೇಕು.ವಚನ ಎಂದರೆ ಪ್ರಮಾಣ, ಜೀವನ ವಿಧಾನ, ಬದುಕಿನ ಬೆಳಕು.ಇಲ್ಲಿನ ಮಕ್ಕಳಿಗೆ ಕನ್ನಡಓದು, ಬರಹ ಬಾರದಿದ್ದರೂಆಂಗ್ಲ ಭಾಷೆಯಲ್ಲಿಯೇ ವಚನಗಳನ್ನು ಕಲಿಸಬೇಕು.ಅವು ಅವರ ಬದುಕಿಗೆಖಂಡಿತ ಬೆಳಕು ನೀಡುವವುಎಂದರು.
ಹರಿಹರದ ಪಂಚಮಸಾಲಿ ಪೀಠದಶ್ವಾಸಗುರುವಚನಾನಂದ ಶ್ರೀಗಳು ಮಾತನಾಡಿ ವಚನಗಳಲ್ಲಿ ಆತ್ಮೋದ್ಧಾರ ಮತ್ತು ಲೋಕ ಕಲ್ಯಾಣಕ್ಕೆ ಬೇಕಾದ ಮೌಲ್ಯಗಳಿವೆ.

        ಕಾಯಕ ಮತ್ತುದಾಸೋಹದ ಬಗ್ಗೆ ಈ ದೇಶದಲ್ಲಿ ಹೇಳುವುದು ಏನೂ ಇಲ್ಲ. ಇಲ್ಲಿನಜನಕ್ಕೆ ಬಸವ ತತ್ವದ ಪರಿಚಯಇಲ್ಲದಿದ್ದರೂ ಬಸವ ತತ್ವವನ್ನುಆಚರಿಸುತ್ತಿದ್ದಾರೆ. ಆದರೆಕಾರ್ಯ ಬಾಹುಳ್ಯದ ನಿಮಿತ್ತ ಮಾನಸಿಕ ಒತ್ತಡ ಜಾಸ್ತಿ.ಅದಕ್ಕಾಗಿ ಶಿವಯೋಗ ಬೇಕು ಎಂದರಲ್ಲದೆ ಪ್ರಾತ್ಯಕ್ಷತೆಯೊಂದಿಗೆಯೋಗದ ಮಹತ್ವವನ್ನು ತಿಳಿಸಿಕೊಟ್ಟರು.

      ಪ್ರಧಾನ ಉಪನ್ಯಾಸಕ, ಸಾಹಿತಿ, ಚಟ್ನಳ್ಳಿ ಮಹೇಶ್‍ಮಾತನಾಡಿ ವಚನ ಸಾಹಿತ್ಯದಲ್ಲಿ ಇಂದಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ.ಅದನ್ನುಅರಿತರೆ ಬದುಕಿಗೆಚೈತನ್ಯ ಬರುವುದು.ಶರಣರಜೀವನ ಸಂದೇಶ ಬಾಯಿಲ್ಲದವರಿಗೆ ಬಾಯಿ ಕೊಡುವುದು.ಜಾತಿಯ ಭಾವನೆತೊಲಗಿಸುವುದು. ಬದುಕನ್ನು ಸಾರ್ಥಕಗೊಳಿಸುವುದು ಎಂದರು.

       ನ್ಯೂಜಿಲ್ಯಾಂಡಿನ ಲಿಂಗಣ್ಣ ಕಲ್ಬುರ್ಗಿಯವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಲಿಂಗಾಯತಧರ್ಮ ಹರಿಯುವ ನದಿಯ ನೀರಿದ್ದಂತೆ.ಎಲ್ಲರೂ ಸಂಘಟಿತರಾಗಿ ನೀರಿನ ಪ್ರಯೋಜನ ಪಡೆದುಕೊಳ್ಳಬೇಕು.ಆಸ್ಟ್ರೇಲಿಯಾದಲ್ಲಿಅಂತರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಎಂದರು.

       ಬಸವ ಸಮಿತಿಯಅಧ್ಯಕ್ಷಬಸವರಾಜ ಮಠಪತಿಮಾತನಾಡಿ ನಮ್ಮ ಈ ಬಸವ ಸಮಿತಿಯಉದ್ಘಾಟನೆಗೆ 25 ವರ್ಷಗಳ ಹಿಂದೆ ಶ್ರೀ ತರಳಬಾಳು ಜಗದ್ಗುರುಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಗಮಿಸಿದ್ದರು.ಇಂದುಇಪ್ಪತ್ತೈದನೆಯ ವರ್ಷಾಚರಣೆಅದೇ ಪೀಠದ ಶಾಖಾ ಮಠದ ಪಂಡಿತಾರಾಧ್ಯ ಶ್ರೀಗಳಿಂದ ನೆರವೇರುತ್ತಿರುವುದುಯೋಗಾಯೋಗಎಂದರು.

         ವೇದಿಕೆಯ ಮೇಲೆ ಸಿಡ್ನಿ ಬಸವ ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಮಠಪತಿ, ಲಿಂಗಣ್ಣಕಲ್ಬುರ್ಗಿ, ಪುಷ್ಪಾ ಬಸವರಾಜ್, ಬಣಕಾರ್, ಸತೀಶ್ ಭದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.ಬಸವ ಸಮಿತಿಯಆರಂಭಿಕ ಪದಾಧಿಕಾರಿಗಳನ್ನು ಸನ್ಮಾನಿ ಸಲಾಯಿತು. ಅಂತರಾಷ್ಟ್ರೀಯ ಬಸವ ಪ್ರತಿಷ್ಠಾನದಅಧ್ಯಕ್ಷ ಸುರೇಶ್ ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ತೇಜಸ್ವಿನಿ ಮತ್ತು ಸಹೋದರಿಯರುಕಾರ್ಯಕ್ರಮ ನಿರೂಪಿಸಿದರು.ಸ್ಥಳೀಯ ಮಕ್ಕಳು `ಕಲ್ಯಾಣವೆಂಬ ಪ್ರಣತೆಯಲ್ಲಿ…’ ವಚನಕ್ಕೆ ಆಕರ್ಷಕ ನೃತ್ಯ ಮಾಡಿದರು.

       ಸಾಣೇಹಳ್ಳಿಯ ಶಿವಸಂಚಾರದ ಕೆ ದಾಕ್ಷಾಯಣಿ ಮತ್ತು ಹೆಚ್‍ಎಸ್ ನಾಗರಾಜ್ ವಚನಗೀತೆಗಳನ್ನು ಹಾಡಿದ್ದು ಮತ್ತು ಶಿವಕುಮಾರ ಕಲಾಸಂಘದಕಲಾವಿದರು ಪ್ರಸ್ತುತಪಡಿಸಿದ `ಉರಿಲಿಂಗ ಪೆದ್ದಿ’ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link