ಶಿರಾ
ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ವೃದ್ಧರು ಆರ್ಥಿಕ ಸಮಸ್ಯೆಯಿಂದ ದೃಷ್ಟಿ ಕಡಿಮೆಯಾಗಿದ್ದರೂ ನೇತ್ರ ತಪಾಸಣೆ ಮಾಡಿಸದೆ ಅಂಧತ್ವದಲ್ಲಿಯೇ ಬದುಕು ಸವೆಸುತ್ತಾರೆ. ಸಾಮಾಜಿಕ ಕಳಕಳಿ ಹೊಂದಿರುವಂತಹ ಶ್ರೀಸಾಯಿ ಚಾರಿಟಬಲ್ ಟ್ರಸ್ಟ್ ಉಚಿತವಾಗಿ ನೇತ್ರ ಚಿಕಿತ್ಸೆ ಮಾಡಿ ದೃಷ್ಟಿ ಮತ್ತೆ ನೀಡುವಂತ ಸೇವೆಯಲ್ಲಿ ತೊಡಗಿದೆ ಎಂದು ನೇತ್ರ ತಜ್ಞ ಡಾ.ಸುರೇಶ್ ಹೇಳಿದರು.
ತಾಲ್ಲೂಕಿನ ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಶ್ರೀಸಾಯಿ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶ್ರೀಸಾಯಿ ಚಾರಿಟಬಲ್ ಟ್ರಸ್ಟ್, ಕಿಯೋನಿಕ್ಸ್ ಫ್ರಾಂಚ್ಯೆಸಿ ಕಂಪ್ಯೂಟರ್, ಫಾಚ್ರ್ಯೂನರ್ ಸಿಸ್ಟಮ್, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದೊಂದಿಗೆ ಭಾನುವಾರ ನಡೆದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿನಲ್ಲಿ ದೂಳು ಬಿದ್ದಿದೆ ಎಂದು ನಾಟಿ ಚಿಕಿತ್ಸೆಗೆ ಒಳಗಾದರೆ ಕಣ್ಣಿನ ದೃಷ್ಟಿ ಕಳೆದು ಕೊಳ್ಳುವಂತ ಸ್ಥಿತಿ ನಿರ್ಮಾಣವಾಗಲಿದೆ. ನಾಲಿಗೆಯಲ್ಲಿ ಕಣ್ಣು ಸ್ವಚ್ಚ ಮಾಡುವಂತಹ ವ್ಯಕ್ತಿಯಲ್ಲಿ ಕಾಯಿಲೆ ಇದ್ದರೆ ನಿಮಗೂ ಅಂಟುವ ಸಾಧ್ಯತೆ ಇರುತ್ತದೆ. ಮನುಷ್ಯನಿಗೆ ಕಣ್ಣು ಪವಿತ್ರವಾದ ಅಂಗವಾಗಿದ್ದು ದೃಷ್ಟಿದೋಷ ಕಂಡು ಬಂದರೆ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯ ಬೇಕೆಂದರು.