ಸವಣೂರ
ಮನುಷ್ಯನಿಗೆ ಅತ್ಯಗತವಾಗಿ ಕಣ್ಣುಗಳ ಸಂರಕ್ಷಣೆ ಮಾಡಿಕೊಳ್ಳಲು ಕಾಲಕಾಲಕ್ಕೆ ಸಲಹೆ ಹಾಗೂ ತಪಾಸಣೆ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ಡಾ|| ಶ್ವೇತಾ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.
ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ, ಕರ್ನಾಟಕ ವೃತ್ತಿಪರ ಶಿಕ್ಷಣ ಪದವೀಧರರ ಸಂಘ(ರಿ) .ಶ್ರೀ ಹಡಪದ ಅಪ್ಪಣ್ಣ ವಿವಿದೊದ್ದೇಶಗಳ ಸಂಘ(ರಿ) ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಜನರು ಕಣ್ಣುಗಳ ಬಗ್ಗೆ ಕಾಳಜಿಯಿಂದ ಇರಬೇಕು. ಎಲ್ಲ ಬಡ ವರ್ಗದ ಜನರಿಗೆ ಉಚಿತ ಕಣ್ಣಿನ ತಪಾಸಣೆ ಮಾಡುವ ಈ ಉಚಿತ ನೇತ್ರ ತಪಾಸಣಾ ಹಾಗೂ ನೇತ್ರದಾನ ಜಾಗೃತಿ ಶಿಬಿರ ಹಳ್ಳಿ ಹಾಗೂ ನಗರ ಜನರು ಸದುಪಯೋಗ ಪಡೆದುಕೊಳ್ಳುವಂತಾಗಬೇಕು.ಈ ಶಿಬಿರದ ಪಲಾನುಭವಿಗಳು ಮತ್ತೊಬ್ಬರಿಗೆ ತಿಳಿಸಿ ಪರೋಪಕಾರಿಗಳಾಗಿ ಎಂದು ಡಾ|| ಶ್ವೇತಾ ಹೇಳಿದರು.
ತಾಲೂಕ ನೇತ್ರಾಧಿಕಾರಿಗಳಾದ ಹೂರಭಾನು ಜಹಾಗಿರ್ದಾರ ಶಿಬಿರದ ಮಹತ್ವದ ಕುರಿತು ಆರೋಗ್ಯ ಸಲಹೆ ನೀಡಿದರು. ಇದೇ ಅವಧಿಯಲ್ಲಿ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಆರೋಗ್ಯಮಿತ್ರ ಶಿವಕುಮಾರ,ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದವರಾದ ರವಿಕುಮಾರ, ತ್ಯಾಗರಾಜ. ಮಹ್ಮದ ಯುಸೂಫ್ ಹೋಂಗಲ್,ಅಮ್ಮಾ ಸಂಸ್ಥೆ(ರಿ)ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 150 ಕ್ಕೂ ಜನರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
