ರಾಣಿಬೆನ್ನೂರು
ಇಂದಿನ ಒತ್ತಡ ಜೀವನದ ಶೈಲಿಯಿಂದ ಹಾಗೂ ಶ್ರಮವಿಲ್ಲದ ಬದುಕಿನಿಂದಾಗಿ ರಕ್ತದೊತ್ತಡ ಮತ್ತು ಸಕ್ಕರೆಯ ಖಾಯಿಲೆಗಳು ಹೆಚ್ಚಾಗುತ್ತಲಿವೆ, ಇದರ ನಿವಾರಣೆಗೆ ಯೋಗ, ಪ್ರಾಣಯಾಮ, ದ್ಯಾನ ಸೂಕ್ತ ಪರಿಹಾರವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕಾ ಅಧ್ಯಕ್ಷ ಡಾ. ನಾಗರಾಜ ದೊಡ್ಮನಿ ಹೇಳಿದರು.
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ವೈದ್ಯ ದಿನಾಚರಣೆಯ ಅಂಗವಾಗಿ ಅಟೋ ಮತ್ತು ಕಾರ ಚಾಲಕರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಹೆಚ್ಚಾಗಿ ಮಹಿಳೆಯರಲ್ಲಿ ರಕ್ತದೊತ್ತಡ ಮತ್ತು ಸಕ್ಕರೆಯ ಖಾಯಿಲೆಗಳು ಹೆಚ್ಚಾಗುತ್ತಲಿರುವುದು ವಿಷಾಧನೀಯ ಎಂದರು.
ಹಿಂದಿನ ಕಾಲದಲ್ಲಿ ನಮ್ಮ ತಾಯಂದಿರು ಶ್ರಮದಾಯಕ ಕಾಯಕಗಳಾದ ಕುಟ್ಟುವ, ಬೀಸುವ, ಕಾರ ಅರೆಯುವ, ಬಟ್ಟೆ ಸೆಳೆಯುವ ಕೆಲಸ ಮಾಡುತ್ತಿದ್ದರಿಂದ ಇಂತಹ ಖಾಯಿಲೆಗಳು ಅವರಲ್ಲಿ ಕಂಡು ಬರುತ್ತಿದ್ದಿಲ್ಲ, ಇಂದು ಈ ಎಲ್ಲ ಕಾಯಕಗಳಿಂದ ಮುಕ್ತರಾದ ಕಾರಣ ಸಕ್ಕರೆಯ ಖಾಯಿಲೆಗಳು ಹೆಚ್ಚಾಗುತ್ತಿವೆ, ಪ್ರತಿದಿನ ಶ್ರಮದಾನ ಮಾಡುವುದರಿಂದ ಸದಾ ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ವೈದ್ಯರು 100 ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಡಾ. ಬಸವರಾಜ ಕೇಲಗಾರ, ಡಾ.ಮನೋಜ ಸಾವುಕಾರ, ಡಾ. ಚಂದ್ರಶೇಖರ ಕೇಲಗಾರ, ಡಾ.ಲಕ್ಷ್ಮಣ ಚಳಗೇರಿ, ಡಾ. ಬಸವರಾಜ ಅಂಗಡಿ, ಡಾ.ಸುಗುಣಾ ಚಳಗೇರಿ, ಡಾ.ವಿದ್ಯಾ ವಾಸುದೇವ ಮೂರ್ತಿ, ಡಾ.ರವಿ ಕುಲಕರ್ಣಿ, ಡಾ.ವಿಕಾಸ ಪುನೀತ, ಡಾ.ವಾಸುದೇವಮೂರ್ತಿ, ಡಾ.ಲಕ್ಷ್ಮಣ ಚಳಗೇರಿ, ಕೊಟ್ರೇಶಪ್ಪ ಎಮ್ಮಿ, ಪ್ರಸನ್ನಕುಮಾರ ಹಲಗೇರಿ, ನಾಗರಾಜ ಅಜ್ಜನವರ, ಗೋಪಿ ಕುಂದಾಪುರ ಸೇರಿದಂತೆ ಐಎಂಎ ಪದಾಧಿಕಾರಿಗಳು ಇದ್ದರು.