ಉಚಿತ ವೈದ್ಯಕೀಯ ತಪಸಣಾ ಶಿಬಿರ

ಮಧುಗಿರಿ :

         ಉತ್ತಮವಾದ ಪೌಷ್ಟಿಕ ಅಂಶಗಳುಳ್ಳ ಆಹಾರಗಳ ಸೇವೆನೆ ಜತೆಗೆ ವೈದ್ಯರ ಸಲಹೆಯಂತೆ ಅಂಗವಿಕಲತೆಯನ್ನು ತಾಯಿ ಗರ್ಭಾವ್ಯವಸ್ಥೆಯಲ್ಲಿ ಇರುವಾಗಲೆ ಕಡಿಮೆ ಮಾಡಬಹುದಾಗಿದೆ ಎಂದು ತಮ್ಮ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಅಭಿಪ್ರಾಯಪಟ್ಟರು.

         ಪಟ್ಟಣದ ಬಿ.ಆರ್.ಸಿ ಕಛೇರಿಯಲ್ಲಿ ಮಂಗಳವಾರ ಸಮಗ್ರ ಶಿಕ್ಷಣ ಅಭಿಯಾನದಡಿಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10 ನೇ ತರಗತಿಯ ವಿವಿಧ ರೀತಿಯ ನ್ಯೂನತೆಗಳನ್ನು ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ 2018-19ನೇ ಸಾಲಿನ ಉಚಿತ ವೈದ್ಯಕೀಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಗಾಡಿನ ಮಹಿಳೆಯರು ವೈಯಕ್ತಿಕ ಸ್ವಚ್ಚತೆಯ ಕಡೆಗೆ ಹೆಚ್ಚು ಗಮನಹರಿಸಬೇಕಾಗಿದೆ ಗರ್ಭಾವ್ಯವಸ್ಥೆಯಲ್ಲಿ ಕಾಲ ಕಾಲಕ್ಕೆ ತಜ್ಞ ವೈದ್ಯರನ್ನು ಸಂರ್ಪಕಿಸುವುದು ಒಳಿತು.

          ಪೋಷಕರು ಧೃತಿಗೇಡ ಬಾರದು ತಮ್ಮ ಮಕ್ಕಳ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಅಂಗವಿಕಲತೆಯನ್ನು ಸೂಕ್ತ ವೈದ್ಯರ ಮಾರ್ಗದರ್ಶನ ದಿಂದ ಬಾಲ್ಯದಲ್ಲಿಯೇ ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ ಶಿಬಿರದ ಸದುಪಯೋಗ ಪಡಿಸಿ ಕೊಳ್ಳುವಂತೆ ಕರೆ ನೀಡಿದರು.

          ಬಿಆರ್‍ಸಿ ಆನಂದ್ ಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ನ್ಯೂನತೆಗಳಿಂದ ಕೂಡಿದ 450 ವಿಕಲಚೇತನ ವಿದ್ಯಾರ್ಥಿಗಳಿದ್ದು ಈಗಾಗಲೇ ಒಟ್ಟು 22 ನ್ಯೂನತೆಗಳನ್ನು ಪಟ್ಟಿ ಮಾಡಲಾಗಿದೆ ಶಿಬಿರದಲ್ಲಿ ಭಾಗವಹಿಸಿರುವ ವೈದ್ಯಧಿಕಾರಿಗಳು ಪರೀಕ್ಷಿಸಿದ ನಂತರ ಅವರ ವರದಿ ಮೇರೆಗೆ ನ್ಯೂನತೆವುಳ್ಳವರಿಗೆ ಔಷಧಗಳ ಜತೆಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಗುವುದು ಎಂದರು.

         ಕಾರ್ಯಕ್ರಮದಲ್ಲಿ ತಾಪಂ ಎಡಿಓ ದೊಡ್ಡಸಿದ್ದಯ್ಯ, ಡಯಟ್ ಪ್ರಾಂಶುಪಾಲ ರಾಮಕೃಷ್ಣಯ್ಯ, ಡಿವೈಪಿಸಿ ನಾಗರಾಜಪ್ಪ ಎಸಿಸಿ ಮಾರುತಿ ಎಲ್.ಟಿ.ದಾಸಣ್ಣ, ಮಹಾದೇವಯ್ಯ, ಲೋಕೇಶ್, ನಾಗರಾಜು, ಪದ್ಮವತಿ, ಶಿವಲಿಂಗಪ್ಪ, ಅನಿತಾ ಎಸ್ . ಎನ್ . ಹನುಮಂತರಾಯಪ್ಪ , ಕೆಎಂಎಫ್ ವಿಸ್ತರಣಾಧಿಕಾರಿ ಗೀರೀಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ರತ್ನವತಿ, ಮೋಹನ್ ಸಿಂಗ್, ಗಂಗಾಧರ್, ಬಿಆರ್‍ಸಿ, ಸಿಆರ್‍ಪಿ ಮನೋವಿಕಾಸ ಸಂಸ್ಥೆಯ ವೈದ್ಯಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link