ಬೆಂಗಳೂರು
ನಾಡಹಬ್ಬ ಮೈಸೂರು ದಸರಾ ಆಚರಣೆಯ ಪ್ರಯುಕ್ತ ಅಕ್ಟೋಬರ್ 7ರಂದು ಯಂತ್ರೋಪಕರಣ ಹಾಗೂ ವಾಹನಗಳಿಗೆ ಆಯುಧ ಪೂಜೆ ಮಾಡಲು ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಸೂಚಿಸಿವೆ.
ಎಲ್ಲ ವಾಹನ, ಯಂತ್ರೋಪಕರಣಗಳನ್ನು ಶುಚಿಗೊಳಿಸಿ ಶ್ರದ್ದಾಭಕ್ತಿಯಿಂದ ಆಯುಧಪೂಜೆ ಆಚರಣೆ ಮಾಡುವಂತೆ ಸೂಚಿಸಿದೆ. ಪೂಜೆಗಾಗಿ ಪ್ರತಿ ವಾಹನಕ್ಕೆ 100 ಹಾಗೂ ವಿಭಾಗೀಯ ಕಾರ್ಯಾಗಾರಕ್ಕೆ ಒಂದು ಸಾವಿರ ರೂಗಳನ್ನು ಕೆಎಸ್‍ಆರ್‍ಟಿಸಿ ನಿಗದಿಪಡಿಸಿದರೆ, ಬಿಎಂಟಿಸಿ ಕೇಂದ್ರೀಯ ಕಾರ್ಯಾಗಾರಗಳಿಗೆ 3 ಸಾವಿರ ರೂ. ಹಾಗೂ ವಾಹನಗಳಿಗೆ 100 ರೂ. ನಿಗದಿಪಡಿಸಿದೆ. ಕಾರು,ಜೀಪುಗಳಿಗೆ 40 ರೂ. ಬಸ್‍ಗಳಿಗೆ 100 ರೂ. ಪೂಜಾ ವೆಚ್ಚವನ್ನು ನಿಗದಪಡಿಸಿದೆ.
ಹಬ್ಬದ ಸಂದರ್ಭದಲ್ಲಿ ಹೂವುಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳು ದುಬಾರಿಯಾಗಿರುವುದರಿಂದ ಒಂದು ವಾಹನಕ್ಕೆ 100 ರೂ. ನೀಡಿರುವುದು ಏನೇನೂ ಸಾಲುವುದಿಲ್ಲ ಎಂಬ ಅಸಮಾಧಾನ ಸಿಬ್ಬಂದಿ ವರ್ಗದಲ್ಲಿ ಕೇಳಿಬರುತ್ತಿದೆ.ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಶುಚಿಗೊಳಿಸಿ ಸುಸ್ಥಿತ್ವದಲ್ಲಿಟ್ಟು ಸಂಪ್ರದಾಯದಂತೆ ಆಯುಧ ಪೂಜೆಯಂದು ಪೂಜೆ ಮಾಡಲು ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಮುಖ್ಯ ಯಾಂತ್ರಿಕ ಅಭಿಯಂತರರು ಸೂಚಿಸಿದ್ದಾರೆ.
ಆಯುಧ ಪೂಜೆಯಂದು ಎಲ್ಲಾ ಘಟಕಗಳು ವಿಭಾಗೀಯ ಕಾರ್ಯಾಗಾರಗಳಲ್ಲಿನ ಬಸ್ ಸೇರಿದಂತೆ ಯಂತ್ರೋಪಕರಣ ಗಳಿಗೆ ಪೂಜೆ ಮಾಡಬೇಕು. ಜೊತೆಗೆ ಅಂದು ವಾಹನಗಳು ಆಫ್‍ರೋಡ್ ಇರದಂತೆ ಕಾಯ್ದುಕೊಳ್ಳುವಂತೆಯೂ ಸೂಚಿಸ ಲಾಗಿದೆ . ಬಿಎಂಟಿಸಿಯ 6432 ವಾಹನಗಳಿಗೆ 6,45,420 ರೂ.ಗಳನ್ನು ಆಯುಧ ಪೂಜೆಗಾಗಿ ಒದಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
