ಮೆಡಿಕಲ್ ಕಾಲೇಜಿನ ಕಟ್ಟಡಕ್ಕೆ ಅನುದಾನ ಬಿಡುಗಡೆಗೆ ಸಿಎಂಗೆ ಸಂಜಯ ಡಾಂಗೆ ಮನವಿ

ಹಾವೇರಿ :

       ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಜಿಲ್ಲೆಗೆ ಈ ಬಾರಿಯ ಬಜೆಟಿನಲ್ಲಿ ಮೆಡಿಕಲ್ ಕಾಲೇಜಿನ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ|| ಸಂಜಯ ಡಾಂಗೆ ಮನವಿ ಸಲ್ಲಿಸಿದ್ದಾರೆ.

       ಜಿಲ್ಲೆ ಶೈಕ್ಷಣಿಕ, ವಾಣಿಜ್ಯ, ಸಾಂಸ್ಕೃತಿಕವಾಗಿಯು ನಗರವಾಗಿ ಬೆಳೆದಿದೆ. ಈ ಜಿಲ್ಲೆಯು 8 ತಾಲೂಕುಗಳಿಂದ ಕೂಡಿದ್ದು , ಜಿಲ್ಲೆಯು ಕೃಷಿ ಪ್ರಧಾನವಾದ ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ವಾಸವಾಗಿರುವ ಜನಸಂಖ್ಯೆಯಲ್ಲಿ ಬಹುತೇಕ ಜನರು ಬಡವರು, ರೈತರು, ಕೃಷಿ ಕಾರ್ಮಿಕರಾಗಿರುತ್ತಾರೆ.

        ಸನ್ 2014-15ರ ಬಜೆಟ್‍ನಲ್ಲಿ ಹಾವೇರಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿದ್ದು, ಈ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣಕ್ಕಾಗಿ ದೇವಗಿರಿಯಲ್ಲಾಪುರ ಗ್ರಾಮದಲ್ಲಿ 54ಎಕರೆ ಭೂಮಿ ಜಿಲ್ಲಾಡಳಿತ ಗುರುತಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ.

          ಈ ಕಾಲೇಜ ಕಟ್ಟಡದ ನಿರ್ಮಾಣಕ್ಕೆ ಬರುವ ಬಜೆಟ್‍ನಲ್ಲಿ ವಿಶೇಷವಾಗಿ ಮೆಡಿಕಲ್ ಕಾಲೇಜಿಗೆ ರೂ.20ಕೋಟಿ ಹಣ ಮಂಜೂರಾತಿ ಘೋಷಿಸಿ ಪ್ರತ್ಯೇಕ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು. ಈ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಬೇಕು. ಇದಕ್ಕೂ ಪೂರ್ವಕವಾಗಿ ಜಿಲ್ಲಾ ಆಸ್ಪತ್ರೆಯು ಸುಸಜ್ಜಿತವಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಕೆ.ಎಂ.ಎಫ್. ಹಾಲು ಒಕ್ಕೂಟದ ಘಟಕ ಹಾಗೂ ಡಿ.ಸಿ.ಸಿ ಬ್ಯಾಂಕ್ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಾರಂಭಿಸಬೇಕು.ಯುವಕರಿಗಾಗಿ ಬೃಹತ್ ಮತ್ತು ಸಣ್ಣ ಕೈಗಾರಿಕೆ ಸ್ಥಾಪನೆಗೆ ಈ ಬಜೆಟ್‍ನಲ್ಲಿ ಮಂಜೂರಾತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link