ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿಗೆ ಆಗ್ರಹ

ಹಾವೇರಿ :

    ನಗರದ ಕಾಗಿನೆಲೆ ರೋಡಿನಲ್ಲಿರುವ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ವಾಲ್ಮೀಕಿ ಸಮಾಜದ ಸಭೆಯಲ್ಲಿ ಜರುಗಿತು. ಸಭೆಯಲ್ಲಿ ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಎಸ್,ಟಿ ವರ್ಗಕ್ಕೆ ಬೇರೆ ಬೇರೆ ಜಾತಿಗಳನ್ನು ಸೇರ್ಪಡೆಯ ಕೂಗು ಉಂಟಾಗುತ್ತಿದೆ.

     ಈಗ ಇರುವ ಸೌಲಭ್ಯಗಳು ಎಲ್ಲರಿಗೂ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಇತರ ಜಾತಿಗಳನ್ನು ಸೇರಿಸುವುದರಿಂದ ಹೇಗೆ ಸೌಲಭ್ಯ ಹಂಚಿಕೆ ಮಾಡಲಾಗುತ್ತದೆ ಎಂಬ ಸಮಸ್ಯೆ ಉದ್ಘವ ಆಗುತ್ತದೆ. ಎಸ್,ಟಿ ವರ್ಗದಲ್ಲಿ ಅತಿ ಕಡು ಬಡವರು ಇದ್ದು ಹೆಚ್ಚಿನ ಸೌಲಭ್ಯ ನೀಡಲು ಸರ್ಕಾರ ಮುಂದಾಗಬೆಕಾಗಿದೆ. ದಬ್ಬಾಳಿಕೆಯ ಬಗ್ಗೆ ಪೋಲೀಸ್ ಸ್ಟೇಷನ್ನಿನಲ್ಲಿ ದೂರು ದಾಖಲಿಸಲು ಹೋದಾಗ ಪ್ರಕಟಣೆಯನ್ನು ದಾಖಲಾತಿ ಮಾಡದೇ ಇರುವುದು.

     ಮತ್ತು ನಮ್ಮವರ ಮೇಲಿನೇ ಕೌಂಟರ್ ಕೇಸ ದಾಖಲಿಸಿ ನಮ್ಮವರ ಮೇಲೆ ಸುಳ್ಳು ಪ್ರಕಟಣೆ ಎಂದು ಬೀ ರಿಪೋರ್ಟ ಹಾಕಿಸುವುದು ಇಂತಹ ಘಟನೆಗಳನ್ನು ಸಹಿಸುವುದಿಲ್ಲ.ಸಮಾಜಕ್ಕೆ ಅನ್ಯಾಯವಾದರೆ ಸಮಾಜವನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಂದು ಚರ್ಚಿಸಲಾಯಿತು. ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

      ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯ,ರಾಷ್ಟ ಮಟ್ಟದಲ್ಲಿ ಬೆಳೆಯಬೇಕಾದರೆ ಪ್ರತಿಭಾ ಪುರಸ್ಕಾರ ಮಾಡುವುದು ಸೇರಿದಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಆರ್ಥಿಕವಾಗಿ ಬಲಿಷ್ಠವಾಗಿರುವ ಸಮಾಜದ ಮುಖಂಡರು ಮುಂದಾಗಬೇಕು ಎಂದು ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.

       ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಧರ ದೊಡ್ಡಮನಿ, ಎಚ್.ಎಮ್ ಓಲೇಕಾರ, ಜಿ.ಎಚ್ ತಳವಾರ, ಶಾಂತಪ್ಪ ದೊಡ್ಡಮನಿ. ನಾಗರಾಜ ತಳವಾರ, ಮಹೇಂದ್ರ ಬಿಳಗಲಿ, ಮಹಾಂತೇಶ ಹೊಳೆಮ್ಮನವರ, ಸುನೀಲ ಹುರಳಿಕುಪ್ಪಿ, ಮಾರುತಿ ಕನವಳ್ಳಿ, ತ್ಯಾಗರಾಜ ಓಲೇಕಾರ, ರವಿ ಗುತ್ತಲ, ಹೊನ್ನಪ್ಪ ಲಿಂಗದಹಳ್ಳಿ ಅನೇಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link