ಗುತ್ತಲ :
ಸುಮಾರು ದಿನಗಳಿಂದ ಮದ್ಯವಿಲ್ಲದೇ ಕಂಗೆಟ್ಟಿದ್ದ ಮದ್ಯ ಪ್ರೀಯರು ಮದ್ಯದ ಅಂಗಡಿ ಎದುರು ಮದ್ಯವನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಂತಿರುವುದು.
ಕೊರೋನಾ ವೈರಸ್ ಮಹಾಮಾರಿ ಹಿನ್ನಲೆಯಲ್ಲಿ ದೇಶದ ಜನತೆಯನ್ನು ರಕ್ಷಿಸಲು ಸರಕಾರ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿಯನ್ನು ನೀಡಿದ ಹಿನ್ನಲೆ ತಿಂಗಳುಗಟ್ಟಲೆ ಮದ್ಯದ ಅಂಗಡಿಗಳು ತೆರೆಯದೆ ಮದ್ಯ ಪ್ರೀಯರು ಅಕ್ಷರಶಹ ಕಂಗಲಾಗಿದ್ದರು ಆದರು ಕೆಲವರು ಕೆಲವು ಕಡೆ ದುಪ್ಪಟ್ಟು ಮೊತ್ತಕ್ಕೆ ಮದ್ಯವನ್ನು ಖರೀದಿಸಿ ಸೇವಿದರೆ ಇನ್ನೂ ಕೆಲವರು ಕಳ್ಳ ಬಟ್ಟಿ ಸಾರಾಯಿಗೆ ಮೊರೆ ಹೋದಂತಹ ಘಟನೆಯನ್ನು ನಾವು ಕಂಡಿದ್ದುಂಟು ಇದಕ್ಕೆಲ್ಲ ಸರಕಾರ ತೆರೆಯೆಳೆದು ಷರತ್ತುಬದ್ದ ನಿಯಮವನ್ನು ಘೋಷಿಸಿ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಪಟ್ಟಣದ ಮದ್ಯದ ಅಂಗಡಿಯೊಂದರ ಮುಂದೆ ಮದ್ಯ ಪ್ರೀಯರು ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಲು ಮುಂದಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







