ತುರುವೇಕೆರೆ
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಗ್ರಾಮ ಗಸ್ತು ಸಮಿತಿ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು.
ಸಿಪಿಐ ಮಹಮದ್ ಸಲೀಂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ಪೊಲೀಸ್ ಸಿಬ್ಬಂದಿಗಳಾದ ಜಗನ್ನಾಥ್, ರಾಮಚಂದ್ರು, ಚಂದ್ರಶೇಖರ್, ಶಿವಲಿಂಗಪ್ಪ ನಾಗರೀಕರಾದ ನವೀನ್ ಬಾಬು, ಅಸ್ಲಾಮ್‍ಪಾಷಾ, ಜಗದೀಶ್, ಕೃಷ್ಣಮೂರ್ತಿ, ಚಂದ್ರಶೇಖರ್ ಸೇರಿದಂತೆ ಪಟ್ಟಣದ ಹಾಗೂ ಸುತ್ತಮುತ್ತ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.