ವಿಜೃಂಭಣೆಯ ಕನಕ ದಾಸರ ಜಯಂತಿ

ಎಂ ಎನ್ ಕೋಟೆ :

         ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಕನಕ ದಾಸರ ಜಯಂತಿ ವಿಜೃಂಭಣಿಯಿಂದ ನಡೆಯಿತು.ಗ್ರಾಮದ ಮೈಲ್ಲಾರಲಿಂಗೇಶ್ವರ ಸ್ವಾಮಿ ದೇವಾಲಯದಿಂದ.ಹೊರಟ ಮೆರವಣಿಗೆ ಊರಿನ ರಾಜಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

          ಕನಕ ದಾಸರ ಮೆರವಣಿಗೆಯಲ್ಲಿ ಲಿಂಗದವೀರರ ಕುಣಿತ, ಗೋರವಯ್ಯಗಳ ಕುಣಿತ, ಕೋಲಾಟಗಳು ಕನಕದಾಸರ  ಮೆರವಣಿಗೆಗೆ ಮೆರೆಗು ನೀಡಿದವು.ಕನಕ ದಾಸರ ಸಂಘದ ಅಧ್ಯಕ್ಷ ವೀರಣ್ಣ ಮಾತನಾಡಿ ಕನಕ ದಾಸರು ನಮ್ಮ ದೇಶಕ್ಕೆ ಮಾದರಿಯಾಗಿದ್ದಾರೆ. ಮಹಾನ್ ದಾರ್ಶನಿಕರು ,ಸಂತರು ದಾಸರ  ಜಯಂತಿಯನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕನಕ ದಾಸರ ಜಯಂತಿಗೆ ಅರ್ಥ ಸಿಗುತ್ತದೆ. ದಾಸರ ಕೀರ್ತನೆಗಳು ಹಿಂದಿಗೂ ನಮ್ಮ ನಾಡಿಗೆ  ಮಾದರಿಯಾಗಿವೆ.ಆದ್ದರಿಂದ ಪ್ರತಿಯೊಬ್ಬರ್ ಕೊಡ ಕನಕದಾಸರ ಆದರ್ಶಗಳನ್ನು ನಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

          ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದಲಿಂಗಯ್ಯ, ಮೈಲಾರಪ್ಪ, ಈರಣ್ಣ, ಶಂಕರಪ್ಪ, ರಾಜು,ಉಮೇಶ್ ಹಾಗೂ ಮುಖಂಡರು  ಇದ್ದರು.ಪೋಟೋ ಕ್ಯಾಪ್ ಚಾರ್ : ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಕನಕ ದಾಸರ ಜಯಂತಿ ವಿಜೃಂಭಣಿಯಿಂದ ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap