ಶ್ರೀ ಗುರುಶಾಂತೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ

ಗುತ್ತಲ :

       ಮನುಷ್ಯನಲ್ಲಿ ಜೀವನದಲ್ಲಿ ಅವಶ್ಯವಾಗಿರುವ ಶಾಂತಿ, ನೆಮ್ಮದಿ, ಸಮೃದ್ಧಿ, ಸಿಗಬೇಕಾದರೆ ಶಿವನ ಪ್ರಾರ್ಥನೆ ಮಾಡುವುದು ಮುಖ್ಯವಾಗಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ|| ವೀರಸೋಮೇಶ್ವರ ಜಗದ್ಗುರು ಹೇಳಿದರು.

       ಸಮೀಪದ ನೇಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಆವರಣದಲ್ಲಿ ನಡೆದ ಶ್ರೀ ಗುರುಶಾಂತೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಹಾಗೂ ಸಾವಿರದೆಂಟು ದಂಪತಿಗಳಿಂದ ಸಾವಿರದೆಂಟು ಶಿವಲಿಂಗ ಪೂಜಾ ಮತ್ತು ಸಹಸ್ರ ಬಿಲ್ವಾರ್ಚನಾ ಮಂಗಲಕರ ಮಹೋತ್ಸವದಲ್ಲಿ ಮಾತನಾಡಿದ ಅವರು, ಸೃಷ್ಠಿ ನಿರ್ಮಾಣ ಮಾಡಿದಂತ ಭಗವಂತನ ಆರಾಧನೆ ಬಹು ಮುಖ್ಯವಾಗಿದೆ. ಶಿವ ಎಂದರೆ ಮಂಗಲಮಯವಾದ ಪ್ರತೀಕವಾಗಿದ್ದಾನೆ ಭಗವಂತ. ನಾವು ನಿಂತ ನೆಲ, ಜಲ ಸೇವಿಸುವ ಆಹಾರ ಭಗವಂತನ ಕೃಪಾದಿಂದ ದೊರೆತಿದ್ದು, ಭಗವಂತನ ನಾಮ ಸ್ಮರಣೆಯಿಂದ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು. ದಿನದ 24 ಗಂಟೆಯಲ್ಲಿ ಎರಡು ನಿಮಿಷಿವಾದರು ದೇವರ ಸ್ಮರಣೆ ಮಾಡದೆ ಹೋದರೆ ಮಾನವ ಜನ್ಮ ಸಾರ್ಥಕವಾಗದು.

       ಕಣ್ವಕುಪ್ಪೆ ಗವಿಮಠದ ಡಾ|| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಉತ್ತಮ ಸಂಸ್ಕøತಿಯನ್ನು ಹೊಂದಿದ ಭಾರತ ದೇಶದಲ್ಲಿ ಜನಿಸಿದ ನಾವುಗಳೆ ಪುಣ್ಯ ಭಾಗ್ಯಶಾಲಿಗಳು. ಧರ್ಮ ಹಾಗೂ ಸಂಸ್ಕತಿಯ ವಿಚಾರದಲ್ಲಿ ಉತ್ತಮ ಚಿಂತನೆಗಳು ಚರ್ಚೆಗಳನ್ನು ಮಾಡುವುದರಿಂದ ಧರ್ಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬಹುದು. ಜಗತ್ತಿಗೆ ಬೆಳಕು ನೀಡುವ ಸೂರ್ಯದೇವ ಹಾಗೂ ಚಂದ್ರದೇವರಂತೆ ಧರ್ಮದಲ್ಲಿ ಪಾಮಾಣಿಕವಾಗಿ ಸಮಾಜಕ್ಕೆ ಒಳತು ಮಾಡುವಂತ ,ಮನೋಭಾವವನ್ನು ಹೊಂದಬೇಕು. ಪ್ರತಿ ವ್ಯಕ್ತಿಯ ಜೀವನದಲ್ಲಿ ಆತನ ಬಾಳಿಗೆ ಬೆಳಕಾಗುವ ವ್ಯಕ್ತಿಯನ್ನು ಹಾಗೂ ವಸ್ತುವನ್ನು ಉನ್ನತ ಮಟ್ಟದಲ್ಲಿ ಸ್ಥಾನಕಲ್ಪಿಸಿ ಗೌರವವನ್ನು ಸೂಚಿಸಬೇಕು ಎಂದರು.

       ಕಾರ್ಯಕ್ರಮದಲ್ಲಿ: ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ, ರಾಮಘಟ್ಟ ರಾಜಗುರು ಪುರವರ್ಗ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಜಿ, ಬಂಕಾಪುರ ಅರಳೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಜಿ. ವಿಘ್ನೇಶ್ವರಯ್ಯ ಸೊಲ್ಲಾಪುರಮಠ, ಸಿ.ವಿ ಚನ್ನವೀರೇಶಗೌಡ, ಜಗದೇವಪ್ಪ ನೆಲೋಗಲ್, ಚಂದ್ರಶೇಖರಪ್ಪ ತೋಟಗೇರ, ಸುನಂದಮ್ಮ ತಿಳವಳ್ಳಿ, ಗುರುಶಾಂತ ಹಿರೇಮಠ, ಶಂಭುಲಿಂಗಯ್ಯ ಮಠದ, ಕೋಟ್ರೇಶ ಮಠದ, ಗುರುಪಾದಯ್ಯ ಸಾಲಿಮಠ, ಶಿವಯೋಗಿ ಹೇಮಗಿರಿಮಠ, ವೀರಯ್ಯ ಪ್ರಸಾಧಿಮಠ, ಮಂಜುನಾಥ ವಟ್ನಳ್ಳಿ ಹಾಗೂ ನೆಗಳೂರು ಮತ್ತು ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳು ಭಾಗವಹಿಸಿದ್ದರು.

      ವಿಶೇಷ: ಶ್ರೀಮಠದ ಆವರಣದಲ್ಲಿ ನಡೆದ 1008 ಶಿವಲಿಂಗ ಪೂಜೆಯನ್ನು 1008 ದಂಪತಿಗಳಿಂದ ಕಾರ್ಯಕ್ರಮದಲ್ಲಿ ಸುಮಾರು ಮೂರಕ್ಕೂ ಹೆಚ್ಚು ಮುಸ್ಲಿಂ ಸಮಾಜದ ದಂಪತಿಗಳಿಂದ ಶಿವಲಿಂಗ ಪೂಜಾ ಕಾರ್ಯ ನಡೆಯಿತು. ಇದು ಸಮಾಜಕ್ಕೆ ಭಾವೈಕ್ಯತೆಯ ಸಂಕೇತವಾಗಿ ಹೊರಹೊಮ್ಮಿತು.

        ಇಂದು ನೆಗಳೂರಿನ ಹಿರೇಮಠದಲ್ಲಿ ಆಯೋಜಿಸಿರುವ 1008 ಶಿವಲಿಂಗ ಪೂಜೆಯನ್ನು 1008 ದಂಪತಿಗಳಿಂದ ಮಾಡಿರುವ ಕಾರ್ಯಕ್ರಮವನ್ನು ಶ್ರೀಮಠದ ಚರಿತ್ರೆಯಲ್ಲಿ ಸ್ವರ್ಣಾ ಅಕ್ಷರದಲ್ಲಿ ಬರೆದಿಡುವಂತ ಶ್ಲಾಘನೀಯ ಕಾರ್ಯವನ್ನು ಶ್ರೀಮಠದ ಪೀಠಾಧಿಪತಿ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿ ಮಾಡಿದ್ದಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ|| ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link