ಹಗರಿಬೊಮ್ಮನಹಳ್ಳಿ:
ಪಟ್ಟಣದ ತಾಲೂಕು ಕಚೇರಿಯ ಬಳಿಯ ಹಗರಿ ಆಂಜನೇಯ ಸ್ವಾಮಿಯ ರಥೋತ್ಸವ ರಾಮನವಮಿ ನಿಮ್ಮಿತ್ತ ಶನಿವಾರ ವಿಜೃಂಭಣೆಯಿಂದ ಜರುಗಿತು.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತ ಆಂಜನೇಯ ಸ್ವಾಮಿ ಮೂರ್ತಿಗೆ ಬೆಳಗ್ಗೆ ಅಭಿಷೇಕ, ಪೂಜೆ ಕೈಂಕಾರ್ಯಗಳು ಜರುಗಿದವು. ಸಂಜೆ ವಿವಿಧ ವಾಧ್ಯಗಳೊಂದಿಗೆ ಮಹಿಳೆಯರು ಕಳಸಗಳನ್ನಿಡಿದು ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುತಂದು, ರಥವನ್ನೇರಿದ ಮೂರ್ತಿ ನಂತರ ಬಸವೇಶ್ವರ ಬಜಾರದಲ್ಲಿ ರಥ ಸಾಗಿತು. ಸೇರಿದ ಸಹಸ್ರಾರು ಭಕ್ತರು ರಥಕ್ಕೆ ಹೂಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ವೀರಶೈವ ಕಲ್ಯಾಣ ಮಂಟಪದಬಳಿ ಇರುವ ಪಾದಗಟ್ಟೆಯವರೆಗೂ ಸಾಗಿ ನಂತರ ಮರಳಿತು. ಮೂಲಸ್ಥಳಕ್ಕೆ ಬಂದು ಸೇರಿದ ರಥಕ್ಕೆ ಭಕ್ತ ಸಮೂಹ ಚಪ್ಪಾಳೆಗೈದು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ