ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಲು ಒತ್ತಾಯ

ಬಳ್ಳಾರಿ

     ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅಡಿ ಸಂಡೂರು ತಾಲೂಕಿನ ರೈತರಿಗೆ ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

     ಅಖಿಲ ಭಾರತ ಕಿಸಾನ್ ಸಭಾ ಸಂಡೂರು ತಾಲೂಕು ಘಟಕವು ಜೂ.10ರಂದು ಸಂಡೂರಿನಿಂದ ಪಾದಯಾತ್ರೆ ನಡೆಸಿ ಬಳ್ಳಾರಿಯ ಸಹಾಯಕ ಆಯುಕ್ತರ ಕಚೇರಿ ಮುಂದೆ ನ್ಯಾಯಕ್ಕಾಗಿ ಮೊರೆ ಇಟ್ಟಿದೆ. ಸಿಪಿಐನ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ವಕೀಲ ಕೆ.ನಾಗಭೂಷಣರಾವ್, ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಜನಾರ್ಧನ ಮತ್ತು ಮುಖಂಡರಾದ ಕೆ.ನಿಂಗಪ್ಪ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ.

     ಅತಿಕ್ರಮಣಕಾರರ ಜಮೀನುಗಳನ್ನು ಈಗಾಗಲೇ ಸರ್ವೇ ಮಾಡಿದ್ದು, ಸಂಡೂರಿನ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಮತ್ತು ಸ್ಥಳ ಪರಿಶೀಲನೆ ವರದಿಯನ್ನು ಆಯಾ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ.

     2005ಕ್ಕಿಂತ ಮುಂಚಿತವಾಗಿ ಜಮೀನುಗಳ ಸ್ವಾಧೀನ ಅನುಭವದಲ್ಲಿದ್ದವರನ್ನು ಒಕ್ಕಲೆಬ್ಬಿಸಲಾಗಿದೆ. ಅಂಥವರಿಗೆ ಅರಣ್ಯ ಹಕ್ಕು ಕಾಯ್ದೆ ಅಧಿನಿಯಮ ಪ್ರಕಾರ ಅದೇ ಜಮೀನು ಇಲ್ಲವೇ ಪರ್ಯಾಯ ಜಮೀನು ನೀಡುವಂತೆ ನೂರಾರು ರೈತರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದರು. ಈವೇಳೆ ಮುಖಂಡರಾದ ಪಿವಿ ಲೋಕೇಶ್, ಪಿ.ಪ್ರಸನ್ನಕುಮಾರ, ಎಂಆರ್ ಇಸ್ಮಾಯಿಲ್, ಬಿ.ವಿಜಯಕುಮಾರ್, ವಿರೂಪಾಕ್ಷಪ್ಪ , ಎಂ.ತಿಮ್ಮೋಜಿರಾವ್ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link