ಹಾವೇರಿ
ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳಸಿಕೊಂಡಲ್ಲಿ ಯಶಸ್ಸು ಶತಸಿದ್ದ , ಸ್ಪಷ್ಟ ಗುರಿ , ಪ್ರಾಮಾಣಿಕ ಕನಸುಗಳನ್ನು ಪ್ರತಿದಿನ , ಪ್ರತಿಕ್ಷಣ ಬೆನ್ನತ್ತಿ. ಯಶಸ್ಸು ನಿಮ್ಮಲ್ಲಿಗೆ ಹುಡುಕಿಕೊಂಡು ಬರುತ್ತದೆ , ನಿಮ್ಮ ಆತ್ಮಬಲ ಜೊತೆಯಿದ್ದರೆ ಆಕಾಶವೇ ಅಂಗೈಯಲ್ಲಿ ಇದ್ದಂತೆ ಎಂದು ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ಡಾ. ಎಂ. ಈ. ಶಿವಕುಮಾರ್ ಹೊನ್ನಾಳಿ ಹೇಳಿದರು.
ನಗರದ ಗುಡ್ಲೆಪ್ಪ ಹಳ್ಳಿಕೇರಿ ಪದವಿ ಕಾಲೇಜಿನ ಸೈನ್ಸ್ ಅಸೋಸಿಯೇಷನ್ ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸು ಸಾಧಿಸಲು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನದ ತಿಳುವಳಿಕೆ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ವೈಜ್ನ್ಯಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ಯರಗೋಪ್ ವಹಿಸಿದ್ದರು.ಪ್ರೊ.ಟಿ.ವಿ.ಚವಾಣ ಸ್ವಾಗತಿಸಿದರು. ಕು.ಪ್ರಿಯ ರೋಡ್ಡಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.ಪ್ರೊ. ಕೆ.ಎಚ್.ಬ್ಯಾಡಗಿ ವಂದಿಸಿದರು. ಪ್ರೊ.ಜಿ.ಎಂ.ಯಣ್ಣಿ , ಪ್ರೊ.ಬಿ.ಎಂ.ಮಲ್ಲಿಕಾರ್ಜುನಪ್ಪ , ಡಾ.ಬಿ.ಎನ್.ವಾಸುದೇವ್ ನಾಯಕ್ ಉಪಸ್ಥಿತರಿದ್ದರು.