ಬಳ್ಳಾರಿ
ಹಂಪಿ ಉತ್ಸವ ನಿಮಿತ್ತ ಹಂಪಿಯ ಆನೆಲಾಯ ಮಂಟಪದ ಆವರಣದಲ್ಲಿ ಆಯೋಜಿಸಲಾಗುತ್ತಿರುವ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರೀಮಿಯರ್ ಶೋ ಇದೇ ಜ.8ರಂದು ಸಂಜೆ ನಡೆಯಲಿದೆ.
ಈಗಾಗಲೇ ಸರಕಾರಿ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಆಯ್ಕೆಯಾದ ಕಲಾವಿದರಿಗೆ ತರಬೇತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಹಾಗೂ ನುರಿತ ತರಬೇತುದಾರರು ನೀಡುತ್ತಿದ್ದು,ಜ.7ರವರೆಗೆ ನಡೆಯಲಿದೆ. ಆನೆಲಾಯದ ಆವರಣದಲ್ಲಿ ವೇದಿಕೆ,ವೀಕ್ಷಣೆಗೆ ಆಗಮಿಸುವ ಜನರು,ಗಣ್ಯರಿಗಾಗಿ ಖುರ್ಚಿಗಳ ವ್ಯವಸ್ಥೆ ಹಾಗೂ ಬೆಳಕಿನ ವ್ಯವಸ್ಥೆಯ ಸಿದ್ಧತಾ ಕಾರ್ಯ ನಡೆಯುತ್ತಿದೆ. ಅಂತಿಮ ಹಂತದ ಸಿದ್ಧತೆಗಳನ್ನು ಹಂಪಿ ವಿಶ್ವಪರಂಪರೆ ಪ್ರಾಧಿಕಾರದ ಆಯುಕ್ತ ಲೋಕೇಶ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಮಾಡಲಿದ್ದಾರೆ.
ಜ.8ರಂದು ಸಂಜೆ 7ರಿಂದ ರಾತ್ರಿ 9.15ರವರೆಗೆ ಪ್ರೀಮಿಯರ್ ಶೋ ನಡೆಯಲಿದ್ದು, ಅಧಿಕಾರಿಗಳು,ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮ ಮಿತ್ರರು ಪಾಲ್ಗೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
