ಕಂಪ್ಲಿ
ನರೇಂದ್ರ ಮೋದಿಯ ಮುಖವನ್ನು ತೋರಿಸುತ್ತಾ ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿರುವ ಬಿ.ಜೆ.ಪಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಇಂದು ಪಟ್ಟಣದ ಓದ್ಸೊ ಜಡೆಮ್ಮ ಪ್ರೌಡ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸಿಗದ ಕಾರಣಕ್ಕಾಗಿ ಬಿಜೆಪಿ ಪಕ್ಷ ನಮ್ಮ ಕಾಂಗ್ರೇಸ್ ಪಕ್ಷದ ದೇವೆಂದ್ರಪ್ಪನನ್ನು ಕಣಕ್ಕಿಳಿಸಿದೆ. ಜಿಲ್ಲೆಯಲ್ಲಿ 15ವರ್ಷ ರಾಜಕಾರಣ ಮಾಡಿದ ಶ್ರೀರಾಮುಲು ಮತ್ತು ಜೆ. ಶಾಂತ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಶ್ರೀರಾಮುಲುಗೆ ಭರವಸೆ ಇದ್ದಿದ್ದರೆ ದೇವೆಂದ್ರಪ್ಪನ ಬದಲಾಗಿ ತಾನೆ ಕಣಕ್ಕಿಳಿದು ಕುಸ್ತಿ ಆಡಬಹುದಿತ್ತು.
ಹೆದರಿ ನಮ್ಮ ಪಕ್ಷದ ವ್ಯಕ್ತಿಯನ್ನೆ ಅಖಾಡಕ್ಕಿಳಿಸಿದ್ದು ಅವರ ಅದೈರ್ಯಕ್ಕೆ ಸಾಕ್ಷಿ ಎಂದು ಗುಡುಗಿದರು. ಮಾತು ಮುಂದುವರೆಸಿದ ಅವರು ಅಚಾತುರ್ಯದ ಒಂದು ಸಣ್ಣ ತಪ್ಪಿನಿಂದಾಗಿ ಶಾಸಕ ಗಣೇಶ್ ದೂರ ಉಳಿಯಬೇಕಾಯಿತು. ಪ್ರತಿಯೊಬ್ಬರೂ ಕಾನೂನಿಗೆ ತಲೆ ಬಾಗಲೆಬೇಕು. ಗಣೇಶರಿಗೆ ದೈರ್ಯ ತುಂಬಲಾಗಿದೆ. ತಪ್ಪು ಮಾಡುವುದು ಸಹಜ ಆದರೆ ತಪ್ಪ್ನು ತಿದ್ದಿಕೊಂಡು ಸಿರಿಯಾದ ದಾರಿಯಲ್ಲಿ ಜನರ ಸೇವೆ ಮಾಡುವುದು ಮುಖ್ಯ.
ಆ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವಲ್ಲಿ ಮುಂದಾಗುತ್ತಾನೆ. ಗಣೇಶ್ ಚುನಾವಣೆಲ್ಲಿ ಗೆದ್ದ ಸ್ವಲ್ಪ ದಿನಗಳಲ್ಲೆ ಇಲ್ಲಿನ ರೈತರಿಗಾಗಿ ಏತ ನೀರಾವರಿಗಾಗಿ 75 ಕೋಟಿ ರುಪಾಯಿಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದಾವೆ. ಹಾಗಾಗಿ ಈ ಚುನಾವಣೆಯಲ್ಲಿ ಉಗ್ರಪ್ಪನವರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೇಸ್ ಅಭ್ಯರ್ಥಿ ಉಗ್ರಪ್ಪ ಮಾತನಾಡಿ ಒಂದು ಕಡೆ ವ್ಮತೀಯ ಸಂಘರ್ಷ ನಡೆದರೆ ಮತ್ತೊಂದು ಕಡೆ ಸರ್ವಾಧಿಕಾರತ್ವ ನಡೆಯುತ್ತಿದೆ. ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವ ಮೋದಿ ನೈಜ ಪರಿಸರದ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ. ದೇಶದಲ್ಲಿ ಜಾತ್ಯತೀತ ಮತ್ತು ಪ್ರಜಾಪ್ರಬುತ್ವ ಉಳಿಯಬೇಕಾದರೆ ದೇಶದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಹಿಂದೆ ಮನಮೋಹನ್ ಸಿಂಗ್‍ನ ಕಾಂಗ್ರೇಸ್ ಸರ್ಕಾರ ಇದ್ದಾಗ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿತ್ತು.
ಆದರೆ ನರೇಂದ್ರ ಮೋದಿ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ದೇಸವನ್ನು ದಿವಾಳಿ ಮಾಡಿದೆ. ಹಾಗಾಗಿ ದುರಾಡಿಳಿತದ ಬಿಜೆಪಿಯನ್ನು ಒದ್ದೊಡಿಸಿ ದೇಶ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕಾಂಗೇಸ್‍ನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಮತದಾರರ ಸಹಕಾರ ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಲವು ಕಾರ್ಯಕರ್ತರು ಕಾಂಗ್ರೇಸ್‍ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಅದ್ಯಕ್ಷ ಸಿರಾಜ್‍ಶೇಖ್, ಜಿಲ್ಲಾದ್ಯಕ್ಷ ಬಿ.ವಿ.ಶಿವಯೋಗಿ, ಕಂಪ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿ.ಆರ್. ಹನುಮಂತ, ಯೂತ್ ಕಾಂಗ್ರೇಸ್ ಅಧ್ಯಕ್ಷ ಕೆ.ತಿಮ್ಮ್ಮಯ್ಯ ಜಿ.ಪಂ.ಸದಸ್ಯರಾದ ವೆಂಕಟನಾರಮ್ಮ, ಮುಖಂಡರಾದ ಮಂಉನಾಥ್, ಗಿರಿಮಲ್ಲಪ್ಪ, ಕೆ.ಎಂ ಮೂಕಯ್ಯ ಸ್ವಾಮಿ, ಹಬೀಬ್ ರೆಹಮಾನ್, ಚಾಂದ್ ಭಾಷ, ಎ.ರೇಣಿಕಪ್ಪ ಇನ್ನ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
