ಬಳ್ಳಾರಿ
ಮೋಕದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಸರಕೊಡುನಲ್ಲಿ ಬುಧುವಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಖುರ್ಷಿದ್ ಬೇಗಂ ಅವರು ಸಾರ್ವಜನಿಕರಿಗೆ ಹಾಗೂ ಶ್ರೀಶೈಲಕ್ಕೆ ಹೋಗಿ ಮರಳಿ ಬಂದಿರುವ ಭಕ್ತಾಧಿಗಳಿಗೆ ಆರೋಗ್ಯ ಶಿಕ್ಷಣ ಮಾಹಿತಿಯ ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸಾರ್ವಜನಿಕರಿಗೆ ಸೊಳ್ಳೆಗಳಿಂದ ಹರಡುವ ಖಾಯಿಲೆಗಳಾದ ಡೆಂಗ್ಯೂ, ಚಿಕ್ಕನ್ ಗುನ್ಯ್, ಮಲೇರಿಯಾ ಹಾಗೂ ಹೆಚ್1,ಎನ್1, ಖಾಯಿಲೆಗಳ ಕುರಿತು ಮಾಹಿತಿಯನ್ನು ನೀಡುವುದರ ಜೊತೆಗೆ ತಮ್ಮ ಸುತ್ತಮುತ್ತ ಪ್ರದೇಶವನ್ನು ಸ್ವಚ್ಚತೆಯಿಂದ ಕಾಪಾಡಬೇಕು ಎಂದು ಕರೆ ನೀಡಿದರು. ಈ ಆರೋಗ್ಯ ಸಿಬ್ಬಂದಿಯಾರದ ಶ್ರೀಮತಿ ಚಂದ್ರಮ್ಮ, ಮಾರುತಿ ಕೆ.ಸಿ ಆಶಾಕಾರ್ಯಕರ್ತೆಯರಾದ ವಿರುಪಮ್ಮ, ನೀಲಮ್ಮ ಇತರರು ಇದ್ದರು.