ಕೆ.ಜಿ.ಎಫ್. ಚಿತ್ರ ನೋಡಲು ಮುಗಿಬಿದ್ದ ಜನ : ಲಘು ಲಾಠಿ ಪ್ರಹಾರ.

ಹೊಸಪೇಟೆ :

       ಇಲ್ಲಿನ ಹಂಪಿ ರಸ್ತೆಯ ಬಾಲ ಚಿತ್ರಮಂದಿರದಲ್ಲಿ ಶುಕ್ರವಾರ ಯಶ್ ಅಭಿನಯದ “ಕೆ.ಜಿ.ಎಫ್. ಚಿತ್ರ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸಿದ್ದರಿಂದ ನೂಕು ನೂಕು ನುಗ್ಗಲು ಉಂಟಾಯಿತು.

         ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗದೇ, ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಬೆಳಿಗ್ಗೆಯಿಂದ ಎಲ್ಲಾ ಶೋಗಳು ಹೌಸ್‍ಫುಲ್ ಆಗಿ ನಡೆದವು. ಬೆಳಿಗ್ಗೆ ಪ್ರಾರಂಭವಾದ ಚಿತ್ರ ಪ್ರದರ್ಶನ ವೇಳೆ ಅಭಿಮಾನಿಗಳು ಯಶ್ ಅವರ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿದರು.

         ಥಿಯೇಟರ್‍ನಲ್ಲಿ ಅಭಿಮಾನಿಗಳು ಚಿತ್ರದ ಮೊಬೈಲ್ ಮೂಲಕ ಸಿನಿಮಾ ಚಿತ್ರೀಕರಣ ಸರ್ವೇ ಸಾಮಾನ್ಯವಾಗಿತ್ತು. ಕೆಲವರು ವಾಟ್ಸಾಪ್ ಲೈವ್ ಮೂಲಕ ಸ್ನೇಹಿತರಿಗೆ ಸಿನಿಮಾ ವೀಕ್ಷಣೆಗೆ ಅನುಕೂಲ ಮಾಡುತ್ತಿದ್ದು ಕಂಡು ಬಂತು. ಪ್ರತಿಯೊಂದು ದೃಶ್ಯಕ್ಕೂ, ಡೈಲಾಗ್‍ಗೆ ಸಿಳ್ಳೆ, ಹರ್ಷೋದ್ಗಾರ ಅಭಿಮಾನಿಗಳು ವ್ಯಕ್ತ ಪಡಿಸುತ್ತಿದ್ದರು.

         ಹೊಸಪೇಟೆ ನಗರದ ಇತಿಹಾಸದಲ್ಲಿ ರಾಜ್‍ಕುಮಾರ್ ಕುಟುಂಬಕ್ಕೆ ಬಿಟ್ಟರೆ ಈ ಪರಿ ಅದ್ಭುತ ಪ್ರತಿಕ್ರಿಯೆ ಯಶ್ ಚಿತ್ರಕ್ಕೆ ಸಿಕ್ಕಿರೋದು ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap