ಹೆಚ್ಚುತ್ತಿರುವ ಮತ ಬಹಿಷ್ಕಾರ ಪ್ರಕರಣ ಜನನಾಯಕರಿಂದ ಸಂಧಿಕಾರ್ಯ

ತಿಪಟೂರು :

      ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಜನತೆ ಬರಗಾಲದಿಂದ ಬೇಸತ್ತು ಕುಡಿಯುವ ನೀರಿಗಾಗಿ ಹತ್ತರು ವರ್ಷಗಳಿಂದ ಹೋರಾಟಮಾಡಿಕೊಂಡು ಬಂದಿದ್ದರು ಯಾವುದೇ ರಾಜಕೀಯ ಪಕ್ಷಗಳು ಸ್ಪಂಧಿಸದ ಕಾರಣ ಮತ ಬಹಿಷ್ಕಾರದ ದಾರಿ ಹಿಡಿದಿರುವುದು ಸರಿಯಾದ ಮಾರ್ಗವಾದರು ಪ್ರಜಾಪ್ರಭುತ್ವಕ್ಕೆ ಕಂಟಕ.

        ಹೊಸ ವರ್ಷದ ಮೊದಲ ದಿನದಂದು ಮಾಜಿ ಶಾಸಕ ಕೆ.ಷಡಕ್ಷರಿ ಹೊನವಳ್ಳಿ ಜನತೆಯನ್ನು ಗ್ರಾಮದೇವತೆಯ ಆವರಣದಲ್ಲಿ ಸೇರಿಸಿ ನಾನು ಮೊದಲ ಬಾರಿ ಶಾಸಕನಾಗಿದ್ದಾಗಲೇ ಏತ ನೀರಾವರಿ ಯೋಜನೆಯನ್ನು ತಂದ್ದಿದ್ದೆನು. ನಂತರ ಬಂದ ಶಾಸಕರು ಈ ಯೋಜನೆಗೆ ನೀರಿನ ಅಲೋಕೇಶನ್‍ಮಾಡಿಸದೇ ಇದೇ ನೀರಿಗೆ ತಾಲ್ಲೂಕಿನ ಹಲವಾರು ಕೆರೆಗಳನ್ನು ಸೇರಿಸಿ ಯಾರಿಗೂ ನಿರಿಲ್ಲದಂತೆ ಮಾಡಿದ್ದಾರೆ.

      ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಅಂತರ್ಜಲ ಪಾತಾಳ ಸೇರಿದ್ದು ಹನಿನೀರಿಗಾಗಿ ಪರಿತಪಿಸುವುಂತಾ ಗಿದೆ. ಆದರೆ ಈ ವರ್ಷ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೇಮಾವತಿ ನಾಲೆಯುಲ್ಲಿ ಜೂನ್ ನಿಂದ ಫೆಬ್ರವರಿ ವರೆಗೂ ನಿರಂತರವಾಗಿ ನೀರನ್ನು ಬಿಟ್ಟರು ಶಾಸಕರು ಎಲ್ಲಾ ಕೆರೆಗಳನ್ನು ತುಂಬಿಸಲು ಹೋಗಿ ಯಾವ ಕೆರೆಗಳನ್ನು ತುಂಬಿಸುವುದಿರಲಿ ಕನಿಷ್ಠ ನೀರನ್ನು ಕೂಡ ಬಿಡಲಿಲ್ಲ.

       ಇದಕ್ಕೆ ಶಾಸಕರ ಬೇಜಾವಬ್ದಾರಿ ತನವೇ ಕಾರಣವೆಂದು ದೂರಿದರು. ಇದರ ಬಗ್ಗೆ ಹೊಸ ಯೋಜನೆಯಾಗಿದ್ದು ಇನ್ನೂ 6 ತಿಂಗಳಲ್ಲಿ ಅದನ್ನು ಅನುಷ್ಠಾನಗೊಳಿಸಲಾಗುದೆಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಚುನಾವಣೆ ಹತ್ತಿರವೇ ಇದ್ದು ನೀವು ಮತ ಬಹಿಷ್ಕಾರ ಮಾಡಿದರೆ ಏನೂ ಪ್ರಯೋಜನವಿಲ್ಲ, ಮುಂದಿನ ದಿನಗಳಲ್ಲಿ ನಿಮ್ಮ ಒಳಿತಿಗೆ ಪ್ರಯತ್ನಿಸುವ ಸೂಕ್ತ ಅಭ್ಯರ್ಥಿಗೆ ಮತನಚಲಾಯಿಸಿ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap