ಹಾನಗಲ್ಲ :
ಇಂದು ಭಾರತ ದೇಶ ಪ್ರಾಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ಬೆಳಿಸಿಕೊಂಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭುತ್ವನ್ನು ಸಾಧಿಸಿದೆ. ಇದರಿಂದ ಹತಾಶಗೊಂಡ ಕಾಂಗ್ರೇಸ್ಸಿಗರು ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ
ಹಾನಗಲ್ಲ ತಾಲೂಕಿನ ಹಿರೂರ ಗ್ರಾಮದಲ್ಲಿ ಲೋಕಸಭೆಯ ಪ್ರಾಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಜನೋಪಯೋಗಿ ಕೆಲಸಗಳಿಗೆ ಇಡೀ ರಾಷ್ಟ್ರವೇ ಹುಬ್ಬೇರಿಸುವಂತೆ ಮಾಡಿದೆ. ಸುಮಾರು 50ಕ್ಕೂ ಅಧಿಕ ಜನಪರ ಯೋಜನೆಯನ್ನು ಕೇಂದ್ರ ಸರಕಾರ ಅನುಷ್ಟಾನಗೋಳಿಸುವ ಮೂಲಕ, ಹಲವಾರು ಮೂಲಭೂತ ಬದಲಾವಣೆ ತಂದಿದ್ದಾರೆ. ಇಂದು ರಾಜಕೀಯ ಬದಲಾಗಿದೆ.
ದಕ್ಷ ಬದ್ಧತೆ ಇರುವ ನಾಯಕನಿಗೆ ಬೆಂಬಲಿಸುವ ಕೆಲಸವಾಗಬೇಕು ಎಂದ ಅವರು, ನರೇಂದ್ರ ಮೋದಿ ಅವರ ಜನಪರ ಕಾಳಜಿಯನ್ನು ಮೆಚ್ಚಿ ಕಾಂಗ್ರೇಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಮತ್ತೊಮ್ಮೆ ಶಿವಕುಮಾರ ಉದಾಶಿ ಆಯ್ಕೆಯಾಗಿ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ ಎಂದರು.
ಹಿರಿಯ ಮುಖಂಡ ಎ.ಎಸ್.ಬಳ್ಳಾರಿ ಮಾತನಾಡಿ. ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಪ್ರಮುಖವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕಾಂಗ್ರೇಸ್ ಕೇವಲ ಗರೀಬಿ ಹಠಾವೋ ಅಂದ ಮಾತ್ರಕ್ಕೆ ಯಾವುದೆ ಬಡವರ ಉದ್ಧಾರ ಆಗಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದರು. ನರೇಂದ್ರ ಮೋದಿ ಒಬ್ಬ ಬದ್ಧತೆ ಇರುವ ಪ್ರಧಾನಿಯಾಗಿದ್ದು, ಪ್ರತಿ ಕುಟುಂಬಕ್ಕೂ ಬ್ಯಾಂಕ ಖಾತೆ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಫಲಾನುಭವಿಗಳ ಖಾತೆ ಹಣ ಸಂದಾಯವಾಗುವಂತೆ ಮಾಡಿದ್ದಾರೆ. ಭಾರತೀಯರು ಸ್ವಾಭಿಮಾನಿ ಬದುಕು ನಡೆಸಬೇಕೆಂಬುದೇ ಪ್ರಧಾನಿಯವರ ಇಚ್ಚೆಯಾಗಿದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಸೇರ್ಪಡೆ :
ಇದೇ ಸಂದರ್ಭದಲ್ಲಿ 30 ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿ.ಎಂ.ಉದಾಸಿ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.ಈ ಸಂದರ್ಭದಲ್ಲಿ ರಾಜಣ್ಣ ಪಟ್ಟಣದ, ಬಿ.ಎಂ.ಪಾಟೀಲ, ಭರ್ಮಣ್ಣ ಚಿಕ್ಕೇರಿ, ಜಿ.ಎಸ್.ದೇಶಪಾಂಡೆ, ಸಿ.ಎಂ.ಪಾಟೀಲ, ಗಂಗಣ್ಣ ಕಾರೇರ, ನಾಗನಗೌಡ ಪಾಟೀಳ ಮೊದಲಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ