ಡಿಸಿಎಂ ಹುದ್ದೆಯ ಆಕಾಂಕ್ಷಿ ನಾನಲ್ಲ : ಶ್ರೀರಾಮುಲು

ಬಳ್ಳಾರಿ

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನ್ನದಾಗಿತ್ತು. ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

    40 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನ್ನದಾಗಿತ್ತು ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಶ್ರೀರಾಮುಲು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿದ್ದ ಬಿ ಎಸ್ ವೈ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂಬುದೇ ನನ್ನ ಮೊದಲ ಆದ್ಯತೆ ಆಗಿತ್ತು.

     ಹೀಗಾಗಿ, ಈ ದಿನ ಸಂಜೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸೋದು ನನಗೆ ಖುಷಿ ತಂದಿದೆ. ನನ್ನನ್ನ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ, ಬೆಂಗಳೂರಿಗೆ ತೆರಳುತ್ತಿರುವೆ ಎಂದು ಹರ್ಷ ವ್ಯಕ್ತಪಡಿಸಿದರು.ಡಿಸಿಎಂ ಹುದ್ದೆಯ ಆಕಾಂಕ್ಷಿ

ನಾನಲ್ಲ ಡಿಸಿಎಂ ಹುದ್ದೆಯ ಆಕಾಂಕ್ಷಿ ನಾನಲ್ಲ :

   ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ. ಫೇಸ್ ಬುಕ್, ವಾಟ್ಸ್ ಅ್ಯಪ್ ಮತ್ತು ಟ್ವಿಟರ್ ನಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದನ್ನು ನಾನು ಗಮನಿಸಿರುವೆ. ನಾನೂ ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿರುವೆ. ಬಿಎಸ್ ವೈ ನಂತ್ರ ನನ್ನ ಹೆಸರು ಪ್ರಸ್ತಾಪ ಆಗುತ್ತಿದೆ ಎಂದು ಹೇಳಿದರು.

ಷಡ್ಯಂತ್ರ:

    ನಿನ್ನೆಯ ದಿನ ಸ್ಪೀಕರ್ ರಮೇಶಕುಮಾರ್  ಅವರು ಕೇವಲ ಮೂವರು ಶಾಸಕರನ್ನು ಮಾತ್ರ ಅನರ್ಹಗೊಳಿಸಿದ್ದಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರ ಅಡಗಿದೆ. ಅವರು ಎಲ್ಲ ಶಾಸಕರನ್ನೂ ಅನರ್ಹಗೊಳಿಸಬೇಕಿತ್ತು. ಯಾಕೆ ಉಳಿದ ಶಾಸಕರನ್ನು ಅನರ್ಹ ಮಾಡಲಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link