ತುಂಗಭದ್ರ ರೈತರ ಎರಡು ಬೆಳೆಗೆ ನೀರು ಹರಿಸುವಂತೆ:ರೈತ ಸಂಘ ಒತ್ತಾಯ

ಬಳ್ಳಾರಿ:

       ಹಿಂದಿನ ವರ್ಷ ರೈತರು ಮಳೆ ಅಬಾವದಿಂದ ಕಾಂಗಾಲು ಹಾಗಿದ್ದರೂ ಸಹ ತುಂಗಭದ್ರ ಎಡದಂಡೆ ಮತ್ತು ಬಲದಂಡೆಯ ರೈತರು ಅದರ ಮದ್ಯ ಎರಡು ಬೆಳೆಯನ್ನು ಬೆಳೆಯುವಲ್ಲಿ ರೈತರು ಯಶಸು ಕಂಡರು.ಈ ವರ್ಷದಲ್ಲಿ ಮಳೆಯ ಪ್ರಮಾಣ ಚೆನ್ನಾಗಿ ಯಾಗಿದ್ದುಈ ಅವಧಿಯಲ್ಲಿ 3ತಿಂಗಳು ಅಂದರೆ ಡಿಸೆಂಬರ್ ಕೊನೆಯವರೆಗೆ ಹರಿಸಬೇಕೆಂದು ಸರ್ಕಾರಕ್ಕೆ ಹಾಗೂ ಮುನಿರಾಬ್ ಜಲ ಮಂಡಳಿ ಅಧಿಕಾರಿಗಳನ್ನ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ದರೂರು ಪುರುಶೊತ್ತಮ ಗೌಡ ಒತ್ತಾಯಿಸಿದರು.

       ನಗರದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಿಂಗಟಲೂರು ಏತನೀರಾವರಿಯನ್ನ 10%ನೀರನ್ನ ಹಡಗಲಿ .ಕೂಡ್ಲಿಗಿ.ಕೊಟ್ಟುರು.ಮತ್ತು ಹಗರಿ ಬೊಮ್ಮನಹಳ್ಳಿ ಭತ್ತದ ಬೆಳೆ ಬೆಳೆಯುವ ಅವಕಾಶವಿಲ್ಲ ಆದ್ದರಿಂದ ಆ ನೀರನ್ನು ತುಂಗಭದ್ರದ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಕೇಳುತ್ತೇವೆ.ಹಿಂದೊಂಮ್ಮೆ ಹೆಚ್ಚುವರಿಯಾಗಿ 60 ಟಿಎಂಸಿ ನೀರನ್ನ ಉತ್ತರ ಕರ್ನಾಟಕದ ಮಂತ್ರಿ ಗಳು ಶಾಸಕರು ತಂದಿದ್ದರು.

        ಹೀಗೆಂದು ಬಳ್ಳಾರಿ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರರನ್ನ ಆ ನೀರನ್ನ ಮಾತ್ರ ಕೋಡಿಸಿ ಎಂದು ಪ್ರೆಶ್ನೆ ಮಾಡಿದರು 359ಟಿಎಂಸಿ ನೀರು ಮಳೆಯಿಂದ ಜಲಾಶಯಕ್ಕೆ ಹರಿದುಬಂದಿದ್ದು ಅದರಲ್ಲಿ 201ಟಿಎಂಸಿ ನೀರು ಹೊರಗೆ ಹರಿದು ಹೊಗಿದೆ ಮೂರು ತಿಂಗಳಲ್ಲಿ 82 ಟಿಎಂಸಿ ನೀರು ಬಳಕೆಯಾಗಿದೆ ಈಗ 76ಟಿಎಂಸಿ ಜಲಾಶಯದಲ್ಲಿದೆ.ಬೆಸಿಗೆ ಬೆಳೆ ಬೆಳೆಯಲು 5ಟಿಎಂಸಿ ನೀರು ಬೇಕಾಗುತ್ತದೆ.ಎಂದು ಮಾಹಿತಿನೀಡಿದರು.

         ಎರಡು ಲಕ್ಷ ರೈತರು ಲಕ್ಷಾಂತರ ರೂಪಾಯಿಗಳು ಕರ್ಚು ಮಾಡಿದ್ದಾರೆ ಅದರೆ ಇಲ್ಲಿರೈತರು ಬೆಳೆದ ಭತ್ತ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರಪ್ತುಹಾಗುತ್ತದೆ ಹಾಗೇಯೆ ಆಂದ್ರಪ್ರದೇಶದ ರೈತರಿಗೆ ಹರಿಸಿದ ನೀರನ್ನು ನಮಗೆ ಲೆಕ್ಕ ತೋರಿಸುತ್ತದೆ ಜಲಮಂಡಳಿ ಕಾರವಾಗಿ ನುಡಿದರು ನೀರು ಬಿಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಿದರು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಎಲ್ಲಾ ರೈತ ಮುಂಖರು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು ಈ ಸಂದರ್ಭದಲ್ಲಿ ರಾಮನಗೌಡ ವೀರೇಶ ಡಿ.ಶಿವಯ್ಯ ಬೀಮನಗೌಡ ಶ್ರೀದರ ಜಾಲಿಹಾಳ್ ಸತ್ಯಯನಾರಾಯಣ ಇನ್ನು ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ