ಚಿಕ್ಕಮಗಳೂರು
ನನ್ನ ಹುಟ್ಟಿದ ದಿನಾಂಕ ನನಗೆ ಗೊತ್ತಿಲ್ಲ, ಇನ್ನು ತಂದೆ-ತಾಯಿದು ಎಲ್ಲಿಂದ ತರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಿಎಎ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು
ನಾನು ಮನೆಯಲ್ಲೇ ಹುಟ್ಟಿದ್ದು , ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ನನ್ನದೇ ಹುಟ್ಟಿದ ದಿನ ನನಗೆ ಗೊತ್ತಿಲ್ಲ. ಇನ್ನು ಅಪ್ಪ-ಅಮ್ಮನದು ಹೇಗೆ ತಂದು ಕೊಡಲಿ.ಹೇಗೆ ಹೇಳಲಿ ಅವರದ್ದು ಇಲ್ಲಾ ಅಂದ್ರೆ ನನ್ನನ್ನು ಡೌಟ್ಫುಲ್ ಅಂತ ಮಾಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಮೇಷ್ಟ್ರು ಬರೆದುಕೊಂಡಿದ್ದರು, ಅದನ್ನೇ ನಾನು ಡೇಟ್ ಆಫ್ ಬರ್ತ್ ಅಂತ ಹೇಳಿದ್ದೆ. ನಾನು ನೇರವಾಗಿ ಐದನೇ ತರಗತಿ ಸೇರಿದವನು ನಮ್ಮಪ್ಪ ನನ್ನನ್ನು ನೇರವಾಗಿ ಐದನೇ ಕ್ಲಾಸ್ ಗೆ ಸೇರಿಸಿಬಿಟ್ಟರು ಆ ರಾಜಪ್ಪ ಮೇಷ್ಟ್ರು ನನ್ನನ್ನ ಅಡ್ಮೀಷನ್ ಮಾಡಿಕೊಳ್ಳದಿದ್ದರೆ ನಾನು ಲಾಯರ್ ಆಗುತ್ತಿರಲಿಲ್ಲ , ಇಲ್ಲಿ ಭಾಷಣ ಕೂಡಾ ಮಾಡುತ್ತಿರಲಿಲ್ಲ .ಜೀವನದಲ್ಲಿ ಸಿಎಂ ಆಗಲು ಸಾಧ್ಯವೂ ಆಗುತ್ತಿರಲಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ