ಟಿಪ್ಪು ಜಯಂತಿ ಕುರಿತು ಅಧಿವೇಶನದಲ್ಲಿ ಚರ್ಚಿಸುವೆ:-ಎಸ್.ಭೀಮಾನಾಯ್ಕ್

ಹಗರಿಬೊಮ್ಮನಹಳ್ಳಿ:

         ಹಜರತ್ ಟಿಪ್ಪು ಸುಲ್ತಾನ್ ಜಯಂತಿ ವಿಷಯವಾಗಿ ಅಧಿವೇಶನದ ವೇಳೆಯಲ್ಲಿ ಮೆರವಣಿಗೆ ಕುರಿತು ಚರ್ಚಿಸುವುದಾಗಿ ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.

           ಅವರು ಪಟ್ಟಣದ ಜಾಲಿನಗರದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ, ದಿ.ಎಂ.ಪಿ.ರವೀಂದ್ರ ವೇದಿಕೆಯಲ್ಲಿ ಹಜರತ್ ಟಿಪ್ಪುಸುಲ್ತಾನ್ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಮಾತನಾಡಿದರು. ಬಹುತೇಕವಾಗಿ ಎಲ್ಲಾ ಜಯಂತಿಗಳು ಅದ್ಧೂರಿಯಾಗಿ ಆಚರಣೆಗೊಳಪಡುತ್ತವೆ. ಆದರೆ, ಕೋಮುವಾದಿಗಳು ಸಮಾಜದಲ್ಲಿ ಅಶಾಂತಿ ಉಂಟಗುತ್ತದೆ ಎಂದು ಹೇಳುವ ಮೂಲಕ ಶಾಂತಿಗೆ ಅವರೇ ಭಂಗವನ್ನುಂಟುಮಾಡುತಿದ್ದಾರೆ. ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ, ನಾವೆಲ್ಲ ಗೌರವ ಕೊಡುವ ಹಿನ್ನೆಲೆಯಲ್ಲಿ ಕಾನೂನಿನ ಆದೇಶವನ್ನು ಪರಿಪಾಲಿಸಬೇಕಾಗುತ್ತೆ. ಆದ್ದರಿಂದ ಇಲ್ಲಿ ಡಿಜಿ ಬೇಡವೆನ್ನುವುದನ್ನು ನಾಣು ಬೆಂಬಲಿಸುತಿದ್ದೇನೆ ಎಂದು ಸಮರ್ಥಿಸಿಕೊಂಡರು.

           ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಅನೇಕ ಮಹಾನಿಯರ ಜಯಂತಿಗಳನ್ನು ಆಚರಣೆಗೆ ತಂದರು ಅದರಂತೆ ಟಿಪ್ಪು ಜಯಂತಿಯೂ ಒಂದು ಎಂದರು. ಜಯಂತಿಯನ್ನು ವಿರೋಧಿಸುವವರಿಗೆ ಪ್ರಶ್ನೆಯೊಂದನ್ನು ಹಾಕುತ್ತೇನೆ. ನಿಮಗೆ ದೇಶದ ಮಹಾನ್ ವ್ಯಕ್ತಿಗಳಾದ ಅಬ್ದುಲ್ ಕಲಾಂ ಆಡಳಿತ, ಜಾಕೀರ್ ಹುಸೇನ್ ತಬಲನಾದ, ಮಹಮದ್ ಷರೀಪ್ ಅವರ ಗಾಯನಗಳು ಕೇಳುವಾಗ ಜಾತಿ ಅಡ್ಡಿಬರಲಿಲ್ಲವೇ, ದೇಶಕ್ಕಾಗಿ, ರಾಜ್ಯ ಉಳಿವಿಗಾಗಿ ಬ್ರೀಟಿಷ್‍ರ ವಿರೋದ್ಧ ಹೋರಾಟಮಾಡಿ ತನ್ನ ಮಕ್ಕಳನ್ನು ಬಲಿಕೊಟ್ಟ ಟಿಪ್ಪು ಸುಲ್ತಾನ್ ಮುಸ್ಲಿಂ ಆಗಿದ್ದಾನೆಯೇ ಎಂದರು. ಯಡಿಯೂರಪ್ಪ, ಅಶೋಕ, ಶೋಭಾ ಕರಂದ್ಲಾಜೆ ಹಾಗೂ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ವೇದಿಕೆಗಳಲ್ಲಿ ಟಿಪ್ಪು ಪೇಟ ತೊಟ್ಟು, ಕೈಯಲ್ಲಿ ಖಡ್ಗವಿಡಿದಾಗ ನಿಮಗೆ ಟಿಪ್ಪು ಯಾರು ಎಂಬುದು ತಿಳಿಯಲಿಲ್ಲವೆ ಎಂದು ಅನೇಕ ಪ್ರಶ್ನೆಗಳನ್ನು ಎಸೆದರು.

        ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅನುಮತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ ಎಂದ ಅವರು, ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ನಾನು ಎಂದಿಗೂ ಬದ್ಧ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದರು.
ಹಜರತ್ ಟಿಪ್ಪು ಸುಲ್ತಾನ್ ಸಂಘದ ತಾಲೂಕು ಅಧ್ಯಕ್ಷ ಸೈಯದ್ ಇರ್ಫಾನ್ ಪ್ರಸ್ತಾವಿಕವಾಗಿ ಮಾತನಾಡಿ, ಟಿಪ್ಪು ಸುಲ್ತಾನ್ ದೇಶ ಮತ್ತು ರಾಜ್ಯ ಕಾಯುವಲ್ಲಿ ಮಾಡಿರುವ ಒಳ್ಳೆಯ ಕೆಲಸ ಮತ್ತು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೆನೆಯುತ್ತ ಆದರ್ಶ ತತ್ವಗಳನ್ನು ಸಮುದಾಯದವರು ಅಳವಡಿಸಿಕೊಳ್ಳೋಣ ಎಂದರು.

         ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿಬಸವರಾಜ್ ಮಾತನಾಡಿ, ಟಿಪ್ಪು ಸುಲ್ತಾನ್ ಈ ದೇಶದ ಮಗನಾಗಿದ್ದು, ಮೈಸೂರು ರಾಜ್ಯಭಾರಮಾಡಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಜಯಂತಿ ವಿರೋಧಿಸುವವರು ಮುರ್ಖರಾಗಿದ್ದಾರೆ ಎಂದ ಅವರು, ರಾಜಕೀಯವಾಗಿ ಜಯಂತಿ ಆಚರಣೆಗೆ ಬಣ್ಣ ಹಚ್ಚುವುದು ಬೇಡ, ಸೌಹರ್ಧತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ತಾ.ಪಂ.ಅಧ್ಯಕ್ಷೆ ಕೆ.ನಾಗಮ್ಮ ಅಧ್ಯಕ್ಷತೆವಹಿಸಿ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎಂಬ ಜಾತಿಗಳೆರಡೇ ಇರುವುದು ಉಳಿದಂತೆ ರೀತಿ, ನೀತಿ, ನಡವಳಿಕೆಗಳು ಮಾತ್ರ ಎಲ್ಲಾ ಒಂದೇ ಆಗಿದ್ದು, ಸಹೋದರತ್ವದಿಂದ ಬಾಳಬೇಕು ಎಂದರು.

         ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್‍ನ ಉಪನ್ಯಾಸಕ ದುರುಗಪ್ಪ ಮಲ್ಲಿ ಉಪನ್ಯಾಸ ನೀಡಿದರು.“ಟಿಪ್ಪು ಜಯಂತಿ ಆಚರಣೆ ಮೆರವಣಿಗೆ, ಡಿಜಿ ಹಾಕಿಕೊಂಡು ಕುಣಿದರೆ ಅರ್ಥವಿಲ್ಲದ್ದು, ಆದರೆ, ಟಿಪ್ಪು ಸುಲ್ತಾನ್‍ರವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡರೆ ಸಾರ್ಥಕವಾಗುತ್ತೆ. ಸಮಾಜದಲ್ಲಿ ಎಲ್ಲಾ ಜನಾಂಗಗಳೊಂದಿಗೆ ಬೆರೆತು ಬಾಳಬೇಕು ದ್ವೇಷ, ಅಸೂಯೆ ಬೇಡ.”-ಬಾಬುವಲಿ, ಅಧ್ಯಕ್ಷರು ಪುರಸಭೆ ಸ್ಥಾಯಿಸಮಿತಿ.

          ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ, ಪುರಸಭೆ ಸದಸ್ಯರಾದ ಜೋಗಿ ಹನುಮಂತ, ವಿ.ಹನುಮಂತಪ್ಪ, ಡಿಶ್ ಮಂಜುನಾಥ, ಹುಡದೇ ಗುರುಬಸವರಾಜ್, ಜಿ.ಪಂ.ಸದಸ್ಯ ಅಕ್ಕಿ ತೋಟೇಶ್, ಟಿಪ್ಪು ಸಂಘದ ಕಾರ್ಯದರ್ಶಿ ಎ.ಹಮ್ಮೀದ್, ಬಿ.ನಜೀರ್, ಶರೀಪ್, ಸಾಬುದ್ದೀನ್, ಟಿ.ಖಾಸಿಂಸಾಬ್, ಮೆಕನಿಕ್ ಗನಿ, ಇಸ್ಮಾಯಿಲ್, ಮುಖಂಡರಾದ ಹಾಜಿ ಇಸ್ಮಾಯಿಲ್ ಸಾಬ್, ಹಾಜಿ ಡಿ.ಎಂ.ಅಜೀಜ್‍ಹುಲ್ಲಾ, ಜರೀನಾ, ಎನ್.ಕೆ.ಇಕ್ಬಾಲ್, ಶೇಖ್ ಅಹಮದ್, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ದೇವೇಂದ್ರ, ಮೈಲಾರಪ್ಪ, ಕೇಶವರೆಡ್ಡಿ, ಸುರೇಶ, ವಾಹಿದ್, ಕನ್ನಿಹಳ್ಳಿ ಚಂದ್ರಶೇಖರ್, ಕೆ.ಜಿ.ಎನ್.ದಾದಾಪೀರ್, ಶಬ್ಬೀರ್, ತಹಸೀಲ್ದಾರ್ ಕೆ.ವಿಜಯಕುಮಾರ್, ಬಿಇಒ ಎಂ.ಶೇಖರಪ್ಪ ಹೊರಪೇಟೆ, ತಾ.ಪಂ.ಪ್ರಭಾರಿ ಇಒ ವಿಶ್ವನಾಥ ಮತ್ತಿತರರು ಇದ್ದರು.

          ಸಂಗೀತ ಶಿಕ್ಷಕಿ ಶಾರದಮ್ಮ ಮಂಜುನಾಥ ಹಾಗೂ ರೇವಣಸಿದ್ದೇಶ ತಂಡ ಪ್ರಾರ್ಥಿಸಿದರು, ಪದವೀದರ ಸಂಘದ ಅಧ್ಯಕ್ಷ ಜಂದಿಸಾಬ್ ಮತ್ತು ಶಿಕ್ಷಕ ಪರಮೇಶ್ವರ ಸೊಪ್ಪಿಮಠ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link