ಹಗರಿಬೊಮ್ಮನಹಳ್ಳಿ:
ತಾಲೂಕಿನ ತಂಬ್ರಹಳ್ಳಿಯ ತಳವಾರ ಪಕ್ಕೀರಪ್ಪ ಇವರಿಗೆ ಸೇರಿದ, ಸುಮಾರು 5 ಟ್ರಿಪ್ ಭತ್ತದ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿದ ಘಟನೆ ಶನಿವಾರ ಬೆಳೆಗಿನ ಜಾವ ಜರುಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ಸಫಲರಾದರೂ ಪಶುಗಳಿಗೆ ಸಂಗ್ರಹಿಸಿದ್ದ ಮೇವು ಸಂಪೂರ್ಣ ಸುಟ್ಟು ಹೋಯಿತು. ಇದರಿಂದ ರೈತನಿಗೆ ಸುಮಾರು 25 ಸಾವಿರ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
