ಪಾಲಿಕೆಯಿಂದ ಕನ್ಸರ್ವೆನ್ಸಿ ಒತ್ತುವರಿ ತೆರವು

ತುಮಕೂರು

      ನಗರದ ಬಿ.ಜಿ.ಪಾಳ್ಯ ವೃತ್ತ ಸಮೀಪ ಕೋರಿ ರೈಸ್ ಮಿಲ್ ಬಳಿಯ ಕನ್ಸರ್ವೆನ್ಸಿಯಲ್ಲಿ ಮಾಡಲಾಗಿದ್ದ ಒತ್ತುವರಿಯನ್ನು ಬುಧವಾರ ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕನ್ಸರ್ವೆನ್ಸಿಯನ್ನು ರಸ್ತೆಯಾಗಿ ಅಭಿವೃದ್ಧಿಪಡಿಸಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆಗೆ ಮನವಿ ಮಾಡಿಕೊಂಡರು.

      ಹಲವು ವರ್ಷಗಳಿಂದ ಈ ಕನ್ಸ್‍ರ್‍ವೆನ್ಸಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದರು. ಉಳಿದ ಖಾಲಿ ಜಾಗದಲ್ಲಿ ಕಸ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿತ್ತು. ಕೆಲ ಮನೆಗಳವರು ಕನ್ಸರ್‍ವೆನ್ಸಿಗೆ ಮುಖವಾಗಿ ಬಾಗಿಲು ಇಟ್ಟುಕೊಂಡಿದ್ದು ಅವರ ಓಡಾಟಕ್ಕೂ ಕಿರಿಕಿರಿಯಾಗಿತ್ತು. ಈ ಭಾಗದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ, ಹೀಗಾಗಿ ಈ ಕನ್ಸರ್‍ವೆನ್ಸಿಯ ಒತ್ತುವರಿ ತೆರವು ಮಾಡಿಸಿ, ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಇಲ್ಲಿನ ನಿವಾಸಿಗಳು ನಗರಪಾಲಿಕೆಗೆ ಎರಡು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದರು.

     8ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಸೈಯದ್ ನಯಾಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಬುಧವಾರ ಕನ್ಸರ್‍ವೆನ್ಸಿಯ ಒತ್ತುವರಿ ತೆರವುಗೊಳಿಸಿ, ಜನಬಳಕೆಗೆ ಉಳಿಸಿಕೊಟ್ಟರು. ಸುಮಾರು ಮೂರು ಮೀಟರ್ ಅಗಲವಿರುವ ಡಾಂಬರು ಇಲ್ಲವೆ, ಕಾಂಕ್ರಿಟ್ ರಸ್ತೆಯಾಗಿ ಈ ಕನ್ಸರ್‍ವೆನ್ಸಿಯನ್ನು ಅಭಿವೃದ್ಧಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು, ಇಲ್ಲಿ ಬೀದಿ ದೀಪಗಳನ್ನು ಅಳವಡಿಸಿ, ಚರಂಡಿ, ಒಳಚರಂಡಿ ನಿರ್ಮಾಣ ಮಾಡಬೇಕು ಎಂದು ನಾಗರೀಕರು ಪಾಲಿಕೆ ಸದಸ್ಯ ಸೈಯದ್ ನಯಾಜ್ ಅವರಿಗೆ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link