ಅಕ್ರಮವಾಗಿ ಸಂಗ್ರಹಿಸಿದ ರೂ.2.41 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ

ಹಾವೇರಿ:

        ಅಕ್ರಮವಾಗಿ ಸಂಗ್ರಹಿಸಿದ 107 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಗುರುವಾರ ರಾತ್ರಿ ಹಾನಗಲ್ ತಾಲೂಕು ಅಕ್ಕಿ ಆಲೂರಿನಲ್ಲಿ ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ.

        ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಶಿರಸಿ ರಸ್ತೆಯ ನಾಲ್ಕರ ಕ್ರಾಸ್‍ನಿಂದ ಅಕ್ಕಿಆಲೂರು ಕಡೆಗೆ ಹೋಗುವ ರಸ್ತೆಯಲ್ಲಿ ಶಿವಯೊಗೆಪ್ಪ ಉಪ್ಪಿನ ಇವರಿಗೆ ಸೇರಿದ ಜಮೀನಿನಲ್ಲಿನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ 2,41,425/- ರೂ. ಮೌಲ್ಯದ ಅಂದಾಜು 107.30 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ರೂ.5 ಲಕ್ಷ ಒಂದು ಲಾರಿ ಜಪ್ತಿಮಾಡಲಾಗಿದೆ.

         ಆರೋಪಿತರಾದ ಶಿವಯೋಗೆಪ್ಪ ಉಪ್ಪಿನ, ಪಾಂಡುರಂಗ ಸೋನಾವಾನೆ ಹಾಗೂ ಬೈಜನಾಥ ಸೋನಾವಾನೆ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ದಾಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ವಿನೋದ ಹೆಗ್ಗಳಗಿ, ಹಾನಗಲ್ ತಹಶೀಲ್ದಾರ ಗಂಗಣ್ಣ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link