ಹೂವಿನಹಡಗಲಿ:
ತಾಲೂಕು ಪಂಚಾಯಿತಿ ಸದಸ್ಯರಾದ ಜೆ.ಶಿವರಾಜ್ ಇವರು ನನ್ನ ಮೇಲೆ ಆರೋಪಿಸಿರುವ ಅಕ್ರಮ ಮರಳು ದಂದೆ, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಕೆ.ಆರ್.ಎಸ್.ನ ಜಿಲ್ಲಾಧ್ಯಕ್ಷ ಚಂದ್ರಶೇಖರ ಹೇಳಿದರು.
ಅವರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ, ಈಚೆಗೆ ತಹಶೀಲ್ದಾರ ಕೆ.ವಿಜಯಕುಮಾರರವರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ಪಿತೂರಿ ರೂಪಿಸಿದ್ದೇ ಎಂದು ಕೂಡಾ ಆರೋಪಿಸಿದ್ದಾರೆ. ಆದರೆ, ಅಧಿಕೃತವಾಗಿ ತಹಶೀಲ್ದಾರರು ಲಂಚ ಸ್ವೀಕರಿಸುತ್ತಿರುವುದು ವೀಡಿಯೋ ಮುಖಾಂತರ ಸಾಭೀತಾಗಿರುವುದರಿಂದ ಯಾರ ಪಿತೂರಿಯ ಅಗತ್ಯವೂ ಇಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು
ಜೆ.ಶಿವರಾಜರವರು ಮಾದಿಗ ಸಮಾಜ ಹಾಗೂ ಪ್ರಗತಿಪರ ಸಂಘಟನೆಗಳ ಹೆಸರಿನಲ್ಲಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದಾರೆ. ಇದರಲ್ಲಿ ಜಾತಿ ವಿಷಯವನ್ನು ಬೆರೆಸುವುದು ಬೇಡ ಎಂದು ವಿನಂತಿಸುತ್ತೇನೆ ಎಂದ ಚಂದ್ರಶೇಖರ, ಅಲ್ಲದೇ, ನನ್ನ ವಿರುದ್ಧ ಅನೇಕ ಸರ್ಕಾರಿ ಅಧಿಕಾರಿಗಳನ್ನು ಮಾಹಿತಿ ಹಕ್ಕು ಅರ್ಜಿ ಹಾಕುವುದರ ಮೂಲಕ ಬ್ಲಾಕ್ ಮೇಲ್ ಮಾಡಿ ಹಣ ಪಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಾನೆ. ಆದರೆ, ಯಾವುದಕ್ಕೂ ಕೂಡಾ ಸರಿಯಾದ ದಾಖಲೆ ಇಲ್ಲದೇ, ಆರೋಪ ಮಾಡುವುದು ಸರಿಯಲ್ಲ, ನಾನು ತಪ್ಪು ಮಾಡಿದ್ದೇ ಆದರೆ ಯಾವುದೇ ಒಂದು ದಾಖಲಾತಿಯನ್ನು ಮುಂದಿಟ್ಟುಕೊಂಡು ಆರೋಪ ಮಾಡಲಿ ಸಾಭೀತಾದರೆ ನಾನು ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ ಎಂದರು.
ನಾನು ಯಾವುದೇ ಜಾತಿಯ ದ್ವೇಷಿ ಅಲ್ಲ, ನನ್ನದು ಕೂಡಾ ಮರಳು ಸಾಗಿಸುವ ಒಂದು ಲಾರಿ ಇದೆ, ನಾನು ಕಾನೂನು ಬದ್ಧವಾಗಿ ಮರಳು ಸಾಗಾಟ ಮಾಡುತ್ತೇನೆ ಅಕ್ರಮ ಸಾಗಾಟ ಮಾಡಿದ್ದರೆ, ಅದನ್ನು ಸಾಭೀತು ಪಡಿಸಲಿ ಎಂದು ಸವಾಲ್ ಹಾಕಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಪ.ಯ.ಗಣೇಶ ಮಾತನಾಡಿ, ನಮ್ಮ ಕೆ.ಆರ್.ಎಸ್. ಸಮಿತಿಯು ಯಾವತ್ತು ಕೂಡಾ ನ್ಯಾಯಪರವಾದ ಹೋರಾಟಕ್ಕೆ ಬೆಂಬಲಿಸುತ್ತಿದೆ, ತಹಶೀಲ್ದಾರರು ಲಂಚ ಸ್ವೀಕರಿಸಿದ್ದು ಸಾಭೀತಾದ್ದರಿಂದ ಜಿಲ್ಲಾಧಿಕಾರಿಗಳು ಅವರನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ನಮ್ಮ ಬೇಡಿಕೆ ವರ್ಗಾವಣೆ ಅಲ್ಲ, ಅವರನ್ನು ಅಮಾನತ್‍ಗೊಳಿಸಿ ತನಿಖೆ ನಡೆಸಬೇಕು ಎಂದರು. ಈ ಕುರಿತು ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡಲಿದೆ ಎಂದು ತಿಳಿಸಿದರು
ಸಂದರ್ಭದಲ್ಲಿ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಎನ್.ಶ್ರೀಧರನಾಯ್ಕ, ಗೋರ್‍ಸೇನಾ ಸಂಘಟನಾ ಕಾರ್ಯದರ್ಶಿ ರವಿನಾಯ್ಕ, ಅಧ್ಯಕ್ಷ ಸೇವ್ಯಾನಾಯ್ಕ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
