ನವದೆಹಲಿ :
ಭಾರತದ ಜಿಡಿಪಿ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿದೆ ಎಂದು ಆರ್ಥಿಕ ವರದಿಗಳು ತಿಳಿಸಿವೆ.ಅಧಿಕೃತ ಅಂಕಿ-ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಕಳೆದ 6 ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟ ದಾಖಲಿಸಿದೆ. 2012-13 ನೇ ಸಾಲಿನ ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.4.3 ರಷ್ಟಕ್ಕೆ ಕುಸಿದಿತ್ತು. ಈ ಬಳಿಕ ಇದೇ ಮೊದಲ ಬಾರಿಗೆ 4.5 ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.
2018-19 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7 ರಷ್ಟಿತ್ತು. ಕಳೆದ ವರ್ಷ “6 ತಿಂಗಳಲ್ಲಿ ಭಾರತದ ಆರ್ಥಿಕತೆ ಶೇ.7.5 ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ ಈ ಬಾರಿ 6 ತಿಂಗಳಲ್ಲಿ ಶೇ.4.8 ರಷ್ಟೇ ಬೆಳವಣಿಗೆ ಸಾಧ್ಯವಾಗಿದ್ದು .2019-20 ರ ಅವಧಿಯ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್ ಬಿಐ ಶೇ.6.9 ರಿಂದ ಶೇ.6.1 ಕ್ಕೆ ಇಳಿಸಿತ್ತು. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ.6 ರಷ್ಟಿತ್ತು. ಇದೂ ಸಹ ಅಲ್ಲಿನ ಆರ್ಥಿಕತೆಗೆ ಸಂಬಂಧಿಸಿದಂತೆ 27 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯದ್ದಾಗಿದೆ ಎಂದು ಚೀನಾ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ ಮತ್ತು ಭಾರತದ ಆರ್ಥಿಕ ತಜ್ಞರು ಹೇಳುವ ಪ್ರಕಾರ ಜಿಡಿಪಿ ಬೆಳವಣಿಗೆಯು ಮೂರನೇ ತ್ರೈಮಾಸಿಕದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ