ಮ್ಯಾನ್ಮಾರ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ…!!!

0
19

ಬೆಂಗಳೂರು

      ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‍ಗೆ ಮಂಗಳವಾರ ಹೊರಟ ಇಂಡಿಗೋ ಏರ್ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮ್ಯಾನ್ಮಾರ್‍ನ ಯಾಂಗೂನ್‍ನಲ್ಲಿ ಇಳಿಸಲಾಗಿದೆ.

       ಎಂಜಿನ್‍ನಲ್ಲಿ ದೋಷ ಕಂಡುಬಂದಿದ್ದನ್ನು ಗಮನಿಸಿದ ಪೈಲಟ್‍ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

        129 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ಏರ್ ವಿಮಾನದ ಎರಡು ಎಂಜಿನ್‍ಗಳ ಪೈಕಿ ಒಂದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಇಂಡಿಗೋ ಏರ್ ಅಧಿಕಾರಿಗಳು ತಿಳಿಸಿದ್ದಾರೆ.

        ವಿಮಾನ ಹಾರಾಟ(ಟೇಕ್‍ಆಫ್)ನಡೆಸಲು ಹೋದ ನಂತರ ಒಂದು ಎಂಜಿನ್‍ನಲ್ಲಿ ಆಯಿಲ್ ಪ್ರೆಶರ್ ಕಾಣಿಸಿಕೊಂಡಿದ್ದು, ಪೈಲಟ್ ಮುನ್ನೆಚ್ಚರಿಕೆ ವಹಿಸಿ ಯಾಂಗೂನ್‍ನಲ್ಲಿ ಇಳಿಸಿದ್ದಾರೆ. ತಕ್ಷಣವೇ ಅಲ್ಲಿಂದ ಮರು ಬುಕ್ಕಿಂಗ್ ಮಾಡಿ ಬ್ಯಾಂಕಾಕ್‍ಗೆ ಪ್ರಯಾಣಿಕರನ್ನು ಕಳುಹಿಸಲಾಗಿದೆ.ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ 129 ಪ್ರಯಾಣಿಕರಿಗೂ ಊಟ, ತಿಂಡಿ, ವಾಸ್ತವ್ಯ ಒದಗಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here