ದಾವಣಗೆರೆ:
ಇಲ್ಲಿನ ಸಿಂಡಿಕೇಟ್ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವತಿಯಿಂದ ಇಂದು (ಜೂ.8ರಂದು) ಮತ್ತು ನಾಳೆ (ಜೂ.9ರಂದು) ನಗರದ ಪ್ರೌಢಶಾಲಾ ಮೈದಾನದಲ್ಲಿ ಗೃಹ ಸಾಲಸೌಲಭ್ಯ ಪ್ರದರ್ಶನ ಮೇಳ ಏರ್ಪಡಿಸಲಾಗಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯ್ಲಲಿ ಮಾತನಡಿದ ಸಿಂಡಿಕೇಟ್ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ನವೀನ ಕುಮಾರ್.ಎನ್, ಇಂದು ಬೆಳಿಗ್ಗೆ 10 ಗಂಟೆಗೆ ಸಿಂಡಿಕೇಟ್ ಬ್ಯಾಂಕ್‍ನ ಮಣಿಪಾಲದ ವಲಕ ಕಚೇರಿ ಎಜಿಎಂ ವಿನಾಯಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರ ಕನಸಿನ ಮನೆಯನ್ನು ನನಸಾಗಿಸುವ ಉದ್ದೇಶದಿಂದ ನಮ್ಮ ಬ್ಯಾಂಕ್ ವತಿಯಿಂದ ಈ ಮೇಳ ಏರ್ಪಡಿಸಲಾಗಿದ್ದು, ಈ ಮೇಳದಲ್ಲಿ ದಾವಣಗೆರೆಯ ನಮ್ಮ ಬ್ಯಾಂಕ್‍ನ ನಾಲ್ಕು ಶಾಖೆಗಳು ಗೃಹ ಸಾಲದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ. ಅಲ್ಲದೇ, ಮೇಳದಲ್ಲಿ ಬಿಲ್ಡರ್ಸ್‍ಗಳು ಸಹ ಭಾಗವಹಿಸಲಿದ್ದು, ಈಗಾಗಲೇ ನಿರ್ಮಾಣವಾಗಿರುವ ಮನೆಗಳನ್ನು ಬಿಲ್ಡರ್ಸ್‍ಗಳು ಆಕರ್ಷಕ ರಿಯಾಯಿತಿ ದರಲ್ಲಿ ಮಾರಾಟ ಮಾಡಲಿದ್ದಾರೆ ಎಂದು ಹೇಳಿದರು.
ಮನೆ ನಿರ್ಮಾಣಕ್ಕೆ ನಮ್ಮ ಬ್ಯಾಂಕ್‍ನಿಂದ ಕನಿಷ್ಠ ಒಂದು ಲಕ್ಷದಿಂದ ಗೃಹ ಸಾಲ ಸೌಲಭ್ಯವನ್ನು ಶೇ.8.65ರ ಬಡ್ಡಿ ದರದಲ್ಲಿ ನೀಡಲಾಗುವುದು. ಮೇಳದಲ್ಲಿ ಸಾಲ ಸೌಲಭ್ಯ ಪಡೆಯುವವರಿಗೆ ಅತೀ ಕಡಿಮೆ ಪ್ರೋಸೆಸಿಂಗ್ ಮತ್ತು ಡ್ಯಾಕುಮೆಂಟೆಶನ್ ಚಾರ್ಜ್ ಬೀಳಲಿದೆ. ಪ್ರಧಾನಮಂತ್ರಿ ಅವಾಸ ಯೋಜನೆಯಡಿಯಲ್ಲಿ 2.67 ಲಕ್ಷ ರೂ. ಸಹಾಯಧನವೂ ದೊರೆಯಲಿದೆ. ಆದ್ದರಿಂದ ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
2018ರ ಡಿಸೆಂಬರ್ 3ರಿಂದ ದಾವಣಗೆರೆಯಲ್ಲಿ ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಲಿದ್ದು, ನಮ್ಮ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ 41 ಶಾಖೆಗಳಿದ್ದು, ಈ ಪೈಕಿ 15 ಸೆಮಿ ಅರ್ಬನ್, 6 ಅರ್ಬನ್, 20 ರೂರಲ್ ಶಾಖೆಗಳಿವೆ ಎಂದ ಅವರು, ದೇಶದಲ್ಲಿ ಸಿಂಡಿಕೇಟ್ ಬ್ಯಾಂಕ್ 4,033 ಶಾಖೆಗಳಿದ್ದು, 4,522 ಎಟಿಎಂಗಳಿವೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಮಿಯಾಕುಮಾರ್ ಸಾಬ್, ಆರ್.ಆಂಜನೇಯ ಹಾಜರಿದ್ದರು.